
ಸುಡಾನ್ ನಿಂದ ನವದೆಹಲಿಗೆ ಆಗಮಿಸಿದ ಭಾರತೀಯರು
ನವದೆಹಲಿ: ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಸಂಘರ್ಷ ಪೀಡಿತ ಸುಡಾನ್ ನಿಂದ 365 ಭಾರತೀಯರು ಶನಿವಾರ ರಾತ್ರಿ ನವದೆಹಲಿಗೆ ಆಗಮಿಸಿದರು.
ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಇನ್ನೂ ಹೆಚ್ಚಿನ ಭಾರತೀಯರು ಭಾರತೀಯರು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. 365 ಮಂದಿ ನವದೆಹಲಿಗೆ ಆಗಮಿಸಿದ್ದಾರೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಾವೇರಿ: ಯುದ್ಧ ಪೀಡಿತ ಸುಡಾನ್ನಿಂದ 362 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಆಗಮನ
More Indians come back home under #OperationKaveri.
— Dr. S. Jaishankar (@DrSJaishankar) April 29, 2023
365 passengers have just landed in New Delhi. pic.twitter.com/H2UQ2G2aMA
ಭಾರತೀಯರನ್ನು ಕರೆತರುವ ಮತ್ತೊಂದು ವಿಮಾನ ಜೆದ್ಹಾದಿಂದ ನವದೆಹಲಿಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
14th batch of Indians leaves Port Sudan under #OperationKaveri.
— Arindam Bagchi (@MEAIndia) April 29, 2023
288 passengers onboard INS Teg are enroute to Jeddah. pic.twitter.com/oN0EcBQNpI
ಶನಿವಾರ ಬೆಳಗ್ಗೆ ವಿಮಾನವೊಂದರ ಮೂಲಕ 231 ಭಾರತೀಯ ಪ್ರಯಾಣಿಕರನ್ನು ಸುಡಾನ್ ನಿಂದ ನವದೆಹಲಿಗೆ ಕರೆತರಲಾಗಿತ್ತು.
Food and water given by Delhi International Airport Limited (DIAL) to passengers from Sudan, who're waiting for medical clearance. pic.twitter.com/UsujqFoN3A
— ANI (@ANI) April 29, 2023