ಹರಿಯಾಣ: ನುಹ್ ಹಿಂಸಾಚಾರ ನಡುವಲ್ಲೇ ಮತ್ತೊಂದು ಮಸೀದಿಗೆ ಬೆಂಕಿ!

ಹರಿಯಾಣದ ನುಹ್ ಪಟ್ಟಣದಲ್ಲಿ ಹಿಂಸಾಚಾರ ಮುಂದವರೆದಿರುವ ನಡುವಲ್ಲೇ ಮತ್ತೊಂದು ಮಸೀದೆಗೆ ಬೆಂಕಿ ಹಚ್ಚಿರುವ ಘಟನೆಯೊಂದು ಗುರುವಾರ ವರದಿಯಾಗಿದೆ.
ನುಹ್ ನಲ್ಲಿರುವ ಸುಟ್ಟ ವಾಹನಗಳು.
ನುಹ್ ನಲ್ಲಿರುವ ಸುಟ್ಟ ವಾಹನಗಳು.

ಗುರುಗ್ರಾಮ: ಹರಿಯಾಣದ ನುಹ್ ಪಟ್ಟಣದಲ್ಲಿ ಹಿಂಸಾಚಾರ ಮುಂದವರೆದಿರುವ ನಡುವಲ್ಲೇ ಮತ್ತೊಂದು ಮಸೀದೆಗೆ ಬೆಂಕಿ ಹಚ್ಚಿರುವ ಘಟನೆಯೊಂದು ಗುರುವಾರ ವರದಿಯಾಗಿದೆ.

ಬುಧವಾರ ರಾತ್ರಿ 11.30ರ ಸುಮಾರಿಗೆ ಎರಡು ಮಸೀದಿಗಳಲ್ಲಿ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ ಎರಡು ಮಸೀದಿಗಳಲ್ಲಿ ಹಾನಿಗಳಾಗಿವೆ ಎಂದು ಹೇಳಲಾಗುತ್ತಿದೆ.

ಒಂದು ಮಸೀದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಆದರೆ, ಮತ್ತೊಂದು ಮಸೀದಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವಂತಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು ಎಂದು ಪೊಲೀಸ್ ಅಧೀಕ್ಷಕ (ನೂಹ್), ವರುಣ್ ಸಿಂಗ್ಲಾ ಅವರು ಹೇಳಿದ್ದಾರೆ.

ಆರೋಪಿಗಳಿಗೆ ಸಮೀಪದ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ನುಹ್ ನಲ್ಲಿ ಪರಿಸ್ಥಿತ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಸಡಿಲಿಸಲಾಗಿದ್ದು, ಜನರು ದೈನಂದಿನ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ರಿಂದ ಮಧ್ಯಾರ್ನ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ನುಹ್ ಉಪ ಆಯುಕ್ತ ಪ್ರಶಾಂತ್ ಪನ್ವಾರ್ ಅವರು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಗುಂಪೊಂದು ಯತ್ನಿಸಿದ ನಂತರ ಸೋಮವಾರ ನುಹ್‌ನಲ್ಲಿ ಕೋಮು ಹಿಂಸಾಚಾರದ ಭುಗಿಲೆದ್ದಿತ್ತು. ನುಹ್‌ನಲ್ಲಿ ಪ್ರಾರಂಭವಾದ ಕೋಮು ಹಿಂಸಾಚಾರವು ಗುರುಗ್ರಾಮವನ್ನು ತಲುಪಿತು. ಈ ಹಿನ್ನೆಲೆಯಲ್ಲಿ ನುಹ್ ಮತ್ತು ಪಲ್ವಾಲ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ಹಿಂಸಾಚಾರದಲ್ಲಿ ಇದೂವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ, 116 ಜನರನ್ನು ಬಂಧಿಸಲಾಗಿದೆ ಎಂದು ಹರ್ಯಾಣ ಸರ್ಕಾರ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com