ದಿಢೀರ್ ನಿರ್ಬಂಧ: ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಂದ ಭಾರತಕ್ಕೆ ಲ್ಯಾಪ್ ಟಾಪ್ ಆಮದು ಸ್ಥಗಿತ!

ಪರವಾನಗಿ ಇಲ್ಲದೇ ಒಳಬರುವ ಸಾಗಣೆಗಳ ಮೇಲೆ ದಿಢೀರ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ ಪಿ ಸಂಸ್ಥೆಗಳು ಲ್ಯಾಪ್ ಟಾಪ್ ಗಳ ಹೊಸ ಆಮದನ್ನು ಸ್ಥಗಿತಗೊಳಿಸಿವೆ. 
ಲ್ಯಾಪ್ ಟಾಪ್
ಲ್ಯಾಪ್ ಟಾಪ್
Updated on

ನವದೆಹಲಿ: ಪರವಾನಗಿ ಇಲ್ಲದೇ ಒಳಬರುವ ಸಾಗಣೆಗಳ ಮೇಲೆ ದಿಢೀರ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ ಪಿ ಸಂಸ್ಥೆಗಳು ಲ್ಯಾಪ್ ಟಾಪ್ ಗಳ ಹೊಸ ಆಮದನ್ನು ಸ್ಥಗಿತಗೊಳಿಸಿವೆ. 

ನಿಯಂತ್ರಕರು ಗುರುವಾರ  ಸಣ್ಣ ಟ್ಯಾಬ್ ನಿಂದ ಹಿಡಿದು ಎಲ್ಲವನ್ನೂ ಒಳಗೊಂಡಿರುವ ಪಿಸಿ ಗಳ ಆಮದು ಮಾಡಿಕೊಳ್ಳುವುದಕ್ಕೆ ಪರವಾನಗಿಯನ್ನು ಕಡ್ಡಾಯಗೊಳಿಸಿದ್ದರು. ಪರಿಣಾಮ ಲ್ಯಾಪ್ ಟಾಪ್ ತಯಾರಕರು ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದೆ. 

ಆಮದು ಕಡಿಮೆ ಮಾಡಿಕೊಂಡು ಸ್ಥಳೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಮದು ಪರವಾನಗಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಹಾಗೂ ಶಾಲಾ ಕಾಲೇಜುಗಳು ಪುನಾರಂಭಗೊಂಡಿರುವ ಈಗಿನ ಸಂದರ್ಭದಲ್ಲಿ 
ಟೆಕ್ ಸಂಸ್ಥೆಗಳು ಈಗ ಪರವಾನಗಿ ಪಡೆಯುವುದಕ್ಕೆ ತ್ವರಿತ ಪ್ರಯತ್ನ ನಡೆಸುತ್ತಿವೆ. ಆದರೆ ಪರವಾನಗಿ ಪಡೆಯುದಕ್ಕೆ ಎಷ್ಟು ಸಮಯವಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಈಗ ಏಕಾ ಏಕಿ ಆಮದು ಸ್ಥಗಿತಗೊಂಡಿದ್ದರಿಂದ ನಿರ್ಣಾಯಕ ಸಮಯದಲ್ಲಿ ವಿದೇಶಿ PC ಗಳಲ್ಲಿ ಬಹು-ಶತಕೋಟಿ ಡಾಲರ್ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com