ಸಿಖ್ ವಿರೋಧಿ ದಂಗೆ: ಕಾಂಗ್ರೆಸ್‌ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕೊಲೆ ಆರೋಪ ಹೊರಿಸಿದ ಸಿಬಿಐ!

1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ಕೊಲೆ ಆರೋಪ ಹೊರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ಕೊಲೆ ಆರೋಪ ಹೊರಿಸಿದೆ. 

ದೆಹಲಿಯ ಗುರುದ್ವಾರ ಪುಲ್ ಬಂಗಾಶ್ ಬಳಿ ಸಿಖ್ಖರ ಹತ್ಯೆಗೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಗುಂಪನ್ನು ಪ್ರಚೋದಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. 'ಟೈಟ್ಲರ್ ಸಿಖ್ಖರನ್ನು ಹತ್ಯೆಗೆ ಜನಸಮೂಹವನ್ನು ಪ್ರಚೋದಿಸಿದರು. ಇದರ ಪರಿಣಾಮವಾಗಿ ಗುಂಪು ಗುರುದ್ವಾರ ಪುಲ್ ಬಂಗಾಶ್ ಅನ್ನು ಸುಟ್ಟುಹಾಕಿತು. ಅಲ್ಲದೆ 1984ರ ನವೆಂಬರ್ 1ರಂದು ಸಿಖ್ ಸಮುದಾಯದ ಮೂವರನ್ನು ಹತ್ಯೆ ಮಾಡಿತ್ತು ಎಂದು ಸಿಬಿಐ ಹೇಳಿದೆ. 

ಗುರುದ್ವಾರ ಪುಲ್ ಬಂಗಾಶ್, ಠಾಕೂರ್ ಸಿಂಗ್ ಮತ್ತು ಬಾದಲ್ ಸಿಂಗ್ ರನ್ನು ಹತ್ಯೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಗುಂಪನ್ನು ಪ್ರಚೋದಿಸುವುದನ್ನು ನಾನು ನೋಡಿದ್ದೇನೆ ಎಂದು ಸಾಕ್ಷಿಯೊಬ್ಬರನ್ನು ಉಲ್ಲೇಖಿಸಿ ಸಿಬಿಐ ಚಾರ್ಜ್ ಶೀಟ್ ಉಲ್ಲೇಖಿಸಿದೆ. ಜೊತೆಗೆ, ಪೆಟ್ರೋಲ್ ಬಾಟಲ್, ಲಾಠಿ, ಕತ್ತಿಗಳು ಮತ್ತು ರಾಡ್‌ಗಳನ್ನು ಹೊತ್ತೊಯ್ಯುತ್ತಿದ್ದ ಗುಂಪನ್ನು ನೋಡಿದ ಇನ್ನೊಬ್ಬ ಸಾಕ್ಷಿಯನ್ನು ಚಾರ್ಜ್‌ಶೀಟ್ ಉಲ್ಲೇಖಿಸಿದೆ. ಅಂದು ಸಂಸದರಾಗಿದ್ದ ಜಗದೀಶ್ ಟೈಟ್ಲರ್ ಕೂಡ ಗುರುದ್ವಾರ ಪುಲ್ ಬಂಗಾಶ್ ಎದುರು ಹಾಜರಾಗಿದ್ದರು ಎಂದ ಅವರು, ಕಾಂಗ್ರೆಸ್ ನಾಯಕರು ಗುರುದ್ವಾರದ ಮೇಲೆ ದಾಳಿ ಮಾಡಲು ಗುಂಪನ್ನು ಪ್ರಚೋದಿಸುತ್ತಿದ್ದಾರೆ.

1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಪುಲ್ ಬಂಗಾಶ್ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಟೈಟ್ಲರ್ ಗೆ ಜಾಮೀನು ಮಂಜೂರು ಮಾಡಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಧಿ ಗುಪ್ತಾ ಆನಂದ್ ಮಾತನಾಡಿ, ಆರೋಪಿಯು ಈಗಾಗಲೇ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಚಾರ್ಜ್ ಶೀಟ್ ನ ಪ್ರತಿಯನ್ನು ಟೈಟ್ಲರ್ ಗೆ ನೀಡುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೋರ್ಟ್ ಸೂಚಿಸಿದೆ.

ಬಿಗಿ ಭದ್ರತೆಯ ನಡುವೆ ಕಾಂಗ್ರೆಸ್ ನಾಯಕ ಟೈಟ್ಲರ್ ನ್ಯಾಯಾಲಯಕ್ಕೆ ಹಾಜರಾದರು. ಅವರ ಪತ್ನಿ ಜೆನ್ನಿಫರ್ ಟೈಟರ್ ಅವರಿಗೆ ಜಾಮೀನುದಾರರಾಗಿ ನಿಂತಿದ್ದಾರೆ. ನ್ಯಾಯಾಲಯವು ಜೆನ್ನಿಫರ್ ಅವರ ಗುರುತು ಮತ್ತು ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ ಶ್ಯೂರಿಟಿಯಾಗಿ ಪರಿಗಣಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com