ಮುಸ್ಲಿಂ ಪ್ರಾಬಲ್ಯದ ನುಹ್‌ನಲ್ಲಿ ಅಕ್ರಮ ಗುಡಿಸಲುಗಳನ್ನು ಧ್ವಂಸಗೊಳಿಸಿದ ಬುಲ್ಡೋಜರ್‌ಗಳು!

ಆಗಸ್ಟ್ 1ರಂದು ಕೋಮು ಘರ್ಷಣೆಗೆ ಸಾಕ್ಷಿಯಾದ ನಂತರ ಹರಿಯಾಣದ ಬಿಜೆಪಿ ಸರ್ಕಾರವು ಮುಸ್ಲಿಂ ಪ್ರಾಬಲ್ಯದ ನುಹ್‌ಗೆ ಬುಲ್ಡೋಜರ್‌ಗಳನ್ನು ನುಗ್ಗಿಸಿದೆ.
ಬಿಟ್ಟು ಭಜರಂಗಿ-ಮೋನು ಮಾನೇಸರ್
ಬಿಟ್ಟು ಭಜರಂಗಿ-ಮೋನು ಮಾನೇಸರ್
Updated on

ನುಹ್(ಹರಿಯಾಣ): ಆಗಸ್ಟ್ 1ರಂದು ಕೋಮು ಘರ್ಷಣೆಗೆ ಸಾಕ್ಷಿಯಾದ ನಂತರ ಹರಿಯಾಣದ ಬಿಜೆಪಿ ಸರ್ಕಾರವು ಮುಸ್ಲಿಂ ಪ್ರಾಬಲ್ಯದ ನುಹ್‌ಗೆ ಬುಲ್ಡೋಜರ್‌ಗಳನ್ನು ನುಗ್ಗಿಸಿದೆ.

ಹರಿಯಾಣದಲ್ಲಿ ಮುಸ್ಲಿಂ ವಿರೋಧಿ ಭಾವನೆಗಳು ಉತ್ತುಂಗದಲ್ಲಿದೆ. ಹಿಂದುತ್ವ ಸಂಘಟನೆಗಳು ಮುಸ್ಲಿಮರು ಮತ್ತು ಅವರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಆಕ್ರಮಣಗಳು ನಡೆಸುತ್ತಿವೆ.

ಆಗಸ್ಟ್ 4ರಂದು ಬುಲ್ಡೋಜರ್‌ಗಳು ತಮ್ಮ ಗುಡಿಸಲುಗಳನ್ನು ನೆಲಸಮಗೊಳಿಸಿದ್ದರಿಂದ ಸುಮಾರು 150 ಬಾಂಗ್ಲಾದೇಶಿ ವಲಸೆ ಕುಟುಂಬಗಳು ತಮ್ಮ ಆಶ್ರಯವನ್ನು ಕಳೆದುಕೊಂಡಿವೆ. ನೆಲಸಮಗೊಳಿಸಿದ ಗುಡಿಸಲುಗಳ ಸಂಖ್ಯೆಯನ್ನು 250 ಎಂದು ಹೇಳಲಾಗುತ್ತಿದ್ದು ಅವರೆಲ್ಲರು 'ಅಕ್ರಮ ಅತಿಕ್ರಮಿಗಳು' ಎಂದು ಕರೆಯಲಾಗುತ್ತಿದೆ.

ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಬುಲ್ಡೋಜರ್ ಚಿಕಿತ್ಸೆಯ ಭಾಗವಾಗಿದೆ ಎಂದು ಸಲಹೆ ನೀಡಿದರು. ವರದಿಯ ಪ್ರಕಾರ, ಅರಣ್ಯ ಇಲಾಖೆಯ ಭೂಮಿಯಲ್ಲಿನ ರಚನೆಗಳನ್ನು ಸಹ ಕೆಡವಲಾಯಿತು. ನಲ್ಹಾರ್ ಶಿವ ದೇವಸ್ಥಾನದ ಹಿಂಭಾಗದ ಐದು ಎಕರೆ ಮತ್ತು ಪುನ್ಹಾನದಲ್ಲಿ ಆರು ಎಕರೆ ಪ್ರದೇಶವನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ.

ಆಗಸ್ಟ್ 1ರ ವಿಶ್ವ ಹಿಂದೂ ಪರಿಷತ್ತಿನ(ವಿಎಚ್‌ಪಿ) 'ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ'ಗೆ ಅನ್ಯಧರ್ಮಿಯ ಯುವಕರು ಖೇಡ್ಲಾ ಮೋಡ್ ಬಳಿ ಅಡ್ಡಿಪಡಿಸಿದ್ದು ಕಲ್ಲು ತೂರಾಟ ನಡೆಸಿದ್ದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಆದಾಗ್ಯೂ, ಭಿವಾನಿ ಡಬಲ್ ಮರ್ಡರ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೋನು ಮೊನೆಸರ್ ಯಾತ್ರೆಯಲ್ಲಿ ಭಾಗಿಯಾಗುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಇದು ನುಹ್ ಹಿಂಸಾಚಾರಕ್ಕೆ ವೇದಿಕೆಯನ್ನು ಸಿದ್ಧಪಡಿಸಿತ್ತು.

ಬಜರಂಗದಳದ ಸದಸ್ಯ ಮತ್ತು ಗೋರಕ್ಷಕ ಮೋನು ಮಾನೇಸರ್ ಅವರು ಈ ವರ್ಷದ ಫೆಬ್ರವರಿಯಲ್ಲಿ ಭಿವಾನಿಯಲ್ಲಿ ಇಬ್ಬರು ಜಾನುವಾರು ಕಳ್ಳಸಾಗಣೆದಾರರನ್ನು ಕೊಂದ ಪ್ರಕರಣದಲ್ಲಿ ಸಂಬಂಧ ಹೊಂದಿದ್ದಾರೆ. ಇನ್ನು ಹಿಂಸಾಚಾರಕ್ಕೆ ಮೋನು ಮಾನೇಸರ್ ವಿಡಿಯೋಗಳು ಕಾರಣವಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಆರೋಪ ಕೇಳಿಬರುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com