ಪ್ರಧಾನಿ ನರೇಂದ್ರ ಮೋದಿಯ ಒಬಿಸಿ ಹಿನ್ನೆಲೆ ಉಲ್ಲೇಖಿಸಿ ರಾಹುಲ್, I.N.D.I.A ವಿರುದ್ಧ ಬಿಜೆಪಿ ಪ್ರತಿದಾಳಿ!

ಬಿಜೆಪಿ ಲೋಕಸಭೆಯಲ್ಲಿಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ವೈಯಕ್ತಿಕ ದಾಳಿ ಹಾಗೂ ಇತರ ಹಿಂದುಳಿದ ವರ್ಗಗಳ ಅಥವಾ ಒಬಿಸಿ ಸದಸ್ಯ ಪ್ರಧಾನಿ ನರೇಂದ್ರ ಮೋದಿ ಅವರ ಅರ್ಹತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಅವಿಶ್ವಾಸ ನಿರ್ಣಯ ಕುರಿತು ವಿಪಕ್ಷಗಳ ವಿರುದ್ಧ  ಪ್ರತಿದಾಳಿ ನಡೆಸಿತು.
ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ
ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ

ನವದೆಹಲಿ: ಬಿಜೆಪಿ ಲೋಕಸಭೆಯಲ್ಲಿಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ವೈಯಕ್ತಿಕ ದಾಳಿ ಹಾಗೂ ಇತರ ಹಿಂದುಳಿದ ವರ್ಗಗಳ ಅಥವಾ ಒಬಿಸಿ ಸದಸ್ಯ ಪ್ರಧಾನಿ ನರೇಂದ್ರ ಮೋದಿ ಅವರ ಅರ್ಹತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಅವಿಶ್ವಾಸ ನಿರ್ಣಯ ಕುರಿತು ವಿಪಕ್ಷಗಳ ವಿರುದ್ಧ  ಪ್ರತಿದಾಳಿ ನಡೆಸಿತು.

ಜಾರ್ಖಂಡ್‌ನ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ, ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡುವ ಮೂಲಕ ತಮ್ಮ ಭಾಷಣ ಪ್ರಾರಂಭಿಸಿದರು. "ರಾಹುಲ್ ಗಾಂಧಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ, ಬಹುಶಃ ಅವರು ತಡವಾಗಿ ಎಚ್ಚರಗೊಂಡಿದ್ದಾರೆ ಎಂದು ದುಬೆ ಹೇಳುವ ಮೂಲಕ ಬಿಜೆಪಿ ಸದಸ್ಯರಿಂದ ಮೆಚ್ಚುಗೆ ಪಡೆದರು. ಅವಿಶ್ವಾಸ ನಿರ್ಣಯ ನೆಪದಲ್ಲಿ ಮಣಿಪುರ ಹಿಂಸಾಚಾರ ಕುರಿತು ಎರಡು ದಿನಗಳ ಚರ್ಚೆಗೆ ಪ್ರತಿಪಕ್ಷಗಳು ಅಪೇಕ್ಷೆ ನಡುವೆ  ಗೌರವ್ ಗೊಗೊಯ್ ಅವರ ದಾಳಿಗೆ ದುಬೆ ತೀಕ್ಷ್ ಪ್ರತಿಕ್ರಿಯೆ ನೀಡಿದರು.

'ಮೋದಿ ಉಪನಾಮ' ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಕ್ಷಮೆಯಾಚಿಸಲು ನಿರಾಕರಿಸಿದ್ದರಿಂದ ರಾಹುಲ್ ಗಾಂಧಿ ಅವರು ಕಾನೂನು ಸಮಸ್ಯೆಗೆ ಸಿಲುಕಿದರು. ಏಕೆ ಅವರು ಕ್ಷಮೆ ಕೇಳಲುತ್ತಿಲ್ಲ ಎಂದು ವಾಗ್ದಾಳಿ ಮುಂದುವರೆಸಿದ ದುಬೆ, "ಮೋದಿ ಕೆಳ ಜಾತಿ, ಒಬಿಸಿಯವರು. ರಾಹುಲ್  ಒಬಿಸಿಗೆ ಏಕೆ ಕ್ಷಮೆ ಕೇಳುತ್ತಾರೆ. ಅವರು ದೊಡ್ಡ ವ್ಯಕ್ತಿ" ಎಂದು ಹೇಳುವ ಮೂಲಕ  ಗುಜರಾತ್‌ನಲ್ಲಿ 'ಇತರ ಹಿಂದುಳಿದ ವರ್ಗ' ವರ್ಗದಲ್ಲಿ ಬರುವ ಮೋದಿಯವರ ಹಿನ್ನೆಲೆಯನ್ನು ಉಲ್ಲೇಖಿಸಿದರು. 

ನಂತರ ಮಾತು ಮುಂದುವರೆಸಿದ ದುಬೆ, ಮೋದಿ  ಹಾಗೂ ಬಡ ಮಗನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಜನರಿಗೆ ಕಟ್ಟಡ, ಕುಡಿಯುವ ನೀರು, ಜನರಿಗೆ ಶೌಚಾಲಯ ನಿರ್ಮಿಸಿಕೊಟ್ಟವರು, ಜನರ ಮನೆಗೆ ಬೆಳಕು ತರಲು ಯತ್ನಿಸಿದವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಹೊರಟಿದ್ದಾರೆ.  ಈ ನಿರ್ಣಯ ಬಡವರ ವಿರುದ್ಧವೇ ಎಂದು ಪ್ರಶ್ನಿಸಿದರು. ಮೋದಿ ಒಬಿಸಿಯವರು ಹೇಳುವ ಮೂಲಕ ಬಿಜೆಪಿಗೆ ಆ ಸಮುದಾಯದ ಬೆಂಬಲ ಹೆಚ್ಚಿಸುವ ನಿಟ್ಟಿನಲ್ಲಿ ದುಬೆ ಪ್ರಯತ್ನಿಸಿದ್ದು ಕಂಡುಬಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com