ಮತ್ತೊಂದು ಅಂಜು ಪ್ರಕರಣ: ಪ್ರೇಮಿಗಾಗಿ ಗಂಡ-ಮಕ್ಕಳ ತೊರೆದು ಕುವೈತ್ ಗೆ ರಾಜಸ್ಥಾನ ಯುವತಿ ಪರಾರಿ!

ಪಾಕಿಸ್ತಾನದ ಸೀಮಾ ಹೈದರ್, ಪಾಕಿಸ್ತಾನಕ್ಕೆ ತೆರಳಿರುವ ಭಾರತದ ಅಂಜು ಪ್ರಕರಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ರಾಜಸ್ಥಾನ ಯುವತಿಯೊಬ್ಬಳು ತನ್ನ ಪ್ರೇಮಿಗಾಗಿ ಗಂಡ-ಮಕ್ಕಳನ್ನು ತೊರೆದು ಕುವೈತ್ ಗೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕುವೈತ್ ಗೆ ರಾಜಸ್ಥಾನ ಯುವತಿ ಪರಾರಿ
ಕುವೈತ್ ಗೆ ರಾಜಸ್ಥಾನ ಯುವತಿ ಪರಾರಿ

ಜೈಪುರ: ಪಾಕಿಸ್ತಾನದ ಸೀಮಾ ಹೈದರ್, ಪಾಕಿಸ್ತಾನಕ್ಕೆ ತೆರಳಿರುವ ಭಾರತದ ಅಂಜು ಪ್ರಕರಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ರಾಜಸ್ಥಾನ ಯುವತಿಯೊಬ್ಬಳು ತನ್ನ ಪ್ರೇಮಿಗಾಗಿ ಗಂಡ-ಮಕ್ಕಳನ್ನು ತೊರೆದು ಕುವೈತ್ ಗೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ದೀಪಿಕಾ ಪಾಟೀದಾರ್ ಎಂಬ ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಮುಸ್ಲಿಂ ಸ್ನೇಹಿತನೊಂದಿಗೆ ಕುವೈತ್‌ಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೂಲಗಳ ಪ್ರಕಾರ ದೀಪಿಕಾ ಪಾಟೀದಾರ್ ತನ್ನ ಪ್ರಿಯಕರ ಇರ್ಫಾನ್‌ ಹೈದರ್‌ ಜೊತೆ ಗಂಡ ಮತ್ತು ಮಕ್ಕಳನ್ನು ತೊರೆದು ಕುವೈತ್ ಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.  ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರು ಬುರ್ಖಾ ಹಾಕಿಕೊಂಡಿರುವ ಚಿತ್ರಗಳನ್ನು ನೋಡಿದ ಬಳಿಕ ಅವರು ಕುವೈತ್‌ಗೆ ಹೋಗಿದ್ದಾರೆ ಎನ್ನುವುದು ಮನೆಯವರಿಗೆ ಗೊತ್ತಾಗಿದೆ.

ದೀಪಿಕಾ ಅವರ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಜುಲೈ 15ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ಹೈದರ್‌ ತಮ್ಮ ಪತ್ನಿಯನ್ನು ಪುಸಲಾಯಿಸಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಹೈದರ್‌ ಗುಜರಾತ್‌ನ ಹಿಮ್ಮತ್‌ ನಗರ ನಿವಾಸಿಯಾಗಿದ್ದು, ಆತನನ್ನು ಭೇಟಿ ಮಾಡಲು ದೀಪಿಕಾ ಆಗ್ಗಾಗ್ಗೆ ಗುಜರಾತ್‌ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಹಿಂದೆ ಇದೇ ರಾಜಸ್ಥಾನದ ಭಿವಾಡಿ ಜಿಲ್ಲೆಯ ಅಂಜು ಎಂಬ ಮಹಿಳೆ ಜುಲೈನಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ 29 ವರ್ಷದ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾ ಅವರನ್ನು ಭೇಟಿಯಾಗಲು ಹೋಗಿದ್ದರು. ಆಕೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಜುಲೈ 21 ರಂದು ರಾಜಸ್ಥಾನದಲ್ಲಿ ತನ್ನ ಕುಟುಂಬವನ್ನು ತೊರೆದು ಭಾರತದ ಗಡಿ ದಾಟಿದ್ದಳು. ಆಕೆ ತನ್ನ ಸ್ನೇಹಿತನನ್ನು ಭೇಟಿಯಾಗಲು ಜೈಪುರಕ್ಕೆ ಹೋಗುವುದಾಗಿ ಪತಿಗೆ ತಿಳಿಸಿದ್ದಳು ಮತ್ತು ತನ್ನ ಸಹೋದರಿಯನ್ನು ಭೇಟಿ ಮಾಡಲು ಗೋವಾಗೆ ಹೋಗುವುದಾಗಿ ತನ್ನ ಕಂಪನಿಗೆ ತಿಳಿಸಿದ್ದಳು. ಆದರೆ ಪಾಕಿಸ್ತಾನಕ್ಕೆ ಹೋಗಿ ಪ್ರೇಮಿಯೊಂದಿಗೆ ವಿವಾಹವಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com