
ನವದೆಹಲಿ: ಕಾಂಗ್ರೆಸ್ ಪಂಜಾಬ್ ನ ಶಾಸಕ ಸಂದೀಪ್ ಜಾಖರ್ ಅವರನ್ನು ಪಕ್ಷ ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಸಂದೀಪ್ ಜಾಖರ್ ಅವರನ್ನು ಅಮಾನತುಗೊಳಿಸಲಾಗಿದೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾದ ಅಮರಿಂದರ್ ಸಿಂಗ್ ರಾಜ ಅವರ ದೂರಿನ ಆಧಾರದಲ್ಲಿ ಶಾಸಕನನ್ನು ಅಮಾನತುಗೊಳಿಸಲಾಗಿದೆ. ಜಾಖರ್ ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್ ಅವರ ಸಂಬಂಧಿಯಾಗಿದ್ದಾರೆ.
ಪಂಜಾಬ್ ಕಾಂಗ್ರೆಸ್ ಟ್ವಿಟರ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, 'ಸಂದೀಪ್ ಜಾಖರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ' ಎಂದು ಹೇಳಿದೆ.
ಜಾಖರ್‌ಗೆ ಪಕ್ಷದ ಸಂವಹನದ ಪ್ರಕಾರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್, 'ನೀವು ಭಾರತ್ ಜೋಡೋ ಯಾತ್ರೆ ಸೇರಿದಂತೆ ಯಾವುದೇ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ' ಮತ್ತು 'ನೀವು ಉಳಿದುಕೊಂಡಿರುವ ಮನೆಯಲ್ಲಿ ಬಿಜೆಪಿ ಧ್ವಜ ಹಾರುತ್ತಿದೆ. ಸಂದೀಪ್ ಜಾಖರ್ ಅವರ ವಿರುದ್ಧ ಪಕ್ಷದ ವಿರುದ್ಧ ಬಹಿರಂಗ ಬಂಡಾಯವೆದ್ದಿರುವ ಆರೋಪ ಕೇಳಿಬಂದಿದೆ.
ನೀವು ಪಕ್ಷ ಮತ್ತು ಪಿಸಿಸಿ ಅಧ್ಯಕ್ಷರ ವಿರುದ್ಧ ಮಾತನಾಡುತ್ತಿದ್ದೀರಿ ಮತ್ತು ನಿಮ್ಮ ಚಿಕ್ಕಪ್ಪ ಸುನಿಲ್ ಜಾಖರ್ ಅವರನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement