ಚಂದ್ರಯಾನದ ಮೊದಲ ಚಿತ್ರವೆಂದು ಅಪಹಾಸ್ಯ: ನಟ ಪ್ರಕಾಶ್ ರಾಜ್ ಟ್ವೀಟ್ ಗೆ ನೆಟ್ಟಿಗರ ಆಕ್ರೋಶ

ವಿವಾದಾತ್ಮಕ ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರು ಇತ್ತೀಚಿನ ಟ್ವೀಟ್ ಮೂಲಕ ಟೀಕೆಗಳ ಹೊಸ ಅಲೆಯನ್ನು ಹುಟ್ಟುಹಾಕಿದ್ದಾರೆ, ಭಾರತದ ಮುಂಬರುವ ಚಂದ್ರಯಾನ-3 ಮಿಷನ್ ಬಗ್ಗೆ ಅವರ ಅಪಹಾಸ್ಯದ ನಿಲುವಿಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್
ಪ್ರಕಾಶ್ ರಾಜ್ ಟ್ವೀಟ್

ವಿವಾದಾತ್ಮಕ ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರು ಇತ್ತೀಚಿನ ಟ್ವೀಟ್ ಮೂಲಕ ಟೀಕೆಗಳ ಹೊಸ ಅಲೆಯನ್ನು ಹುಟ್ಟುಹಾಕಿದ್ದಾರೆ, ಭಾರತದ ಮುಂಬರುವ ಚಂದ್ರಯಾನ-3 ಮಿಷನ್ ಬಗ್ಗೆ ಅವರ ಅಪಹಾಸ್ಯದ ನಿಲುವಿಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಭಾರತದ ಬಹುನೀರಿಕ್ಷೆಯ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದ್ದು, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರ ಮೊಗದಲ್ಲಿ ಸಂತಸ ಮೂಡಿದೆ.

ದೇಶದ್ಯಾಂತ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಸಲು ವಿಶೇಷ ಪ್ರಾರ್ಥನೆಗಳು ಹಾಗೂ ಚಂದ್ರಯಾನ ಯೋಜನೆಯಲ್ಲಿ ಈವರೆಗಿನ ಯಶಸ್ಸಿಗೆ ಸಾಕಷ್ಟು ಪ್ರಶಂಸೆ ನಡೆಯುತ್ತಿವೆ. ಇದೇ ವೇಳೆ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಮುನ್ನ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರನ್ನು ಅಪಹಾಸ್ಯ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಚಂದ್ರಯಾನ - 3 ಬಗ್ಗೆ ದೇಶವೇ ಹೆಮ್ಮೆಪಡುತ್ತಿರುವಾಗ ಬಹುಭಾಷಾ ನಟ ಪ್ರಕಾಶ್ ರಾಜ್ ಚಂದ್ರಯಾನ 3ನ್ನು ವ್ಯಂಗ್ಯವಾಡಿದ್ದಾರೆ. ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್, ತಾಜಾ ಸುದ್ದಿ: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದು ಜಸ್ಟ್ ಆಸ್ಕಿಂಗ್, ವಿಕ್ರಮ್ ಲ್ಯಾಂಡರ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಅವರ ಈ ಟ್ವೀಟ್‌ ವೈರಲ್‌ ಆಗಿದ್ದು, ಈ ಪೋಸ್ಟ್‌ಗೆ ನೆಟ್ಟಿಗರು ಪ್ರಕಾಶ್‌ ರಾಜ್‌ ವಿರುದ್ಧ ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ, ಹಲವರು ನಟನ ವಿರುದ್ಧ ಟ್ರೋಲ್‌ ಮಾಡ್ತಿದ್ದಾರೆ.

ದೇಶ ಭಕ್ತಿ,‌ದೇಶದ‌ ಏಳ್ಗೆ ಸಹಿಸದ ಒಂಚೂರು ದೇಶದ ಬಗ್ಗೆ ಅಭಿಮಾನವಿಲ್ಲದ ರೈ ಈ‌ ರೀತಿ ಪೋಸ್ಟ್ ಮಾಡಿದ್ದಾರೆ ಇದು ದೇಶದ್ರೋಹಕ್ಕೆ ಸಮಾನ ಪ್ರಕಾಶ ರೈ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆಧರದಿ ಕಾನೂನು ಕ್ರಮಕೈಗೊಳ್ಳಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.

ವ್ಯಂಗ್ಯ ಮಾಡುವುದಕ್ಕೂ ಲಿಮಿಟ್ ಇದೆ. ದೇಶದ ವಿರುದ್ಧವೇ ಟ್ವೀಟ್ ಮಾಡುವುದಲ್ಲ ಎಂದು ಬುದ್ದಿ ಹೇಳಿದ್ದಾರೆ. ಮೋದಿಯನ್ನು ದ್ವೇಷಿಸುವುದು ಒಂದು ವಿಷಯ, ಆದರೆ ಭಾರತದ ಅಭಿವೃದ್ಧಿಯನ್ನು ದ್ವೇಷಿಸುವುದು ಅಸಹ್ಯಕರ ಮತ್ತು ಪ್ರಕಾಶ್ ರಾಜ್ ಅವರಂತಹ ಕೀಳು ಜೀವಿಗಳು ಮಾತ್ರ ಮಾಡಬಹುದು! ಚಂದ್ರಯಾನವು ಭಾರತದ ಹೆಮ್ಮೆ, ಮತ್ತು ಇಡೀ ದೇಶವು ಯೋಜನೆಯ ಹಿಂದೆ ಇದೆ, ಅಂತಹ ದೇಶ ದ್ರೋಹಿಗಳನ್ನು ಹೊರತುಪಡಿಸಿ, ಭಾರತವು ಏಳಿಗೆಯನ್ನು ಬಯಸುವುದಿಲ್ಲ ಎಂದು ಪ್ರಕಾಶ್‌ ರಾಜ್‌ ವಿರುದ್ದ ಕುಟುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com