ಮಹಿಳೆಯರು-ಅಲ್ಪಸಂಖ್ಯಾತರು ಸಂಕಷ್ಟದಲ್ಲಿರುವಾಗ ಸ್ವಾತಂತ್ರ್ಯ ದಿನಾಚರಣೆ ಸಂತೋಷಪಡಲು ಸಾಧ್ಯವಿಲ್ಲ: ಪ್ರಕಾಶ್ ರಾಜ್
ಮಂಗಳವಾರ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ದೇಶದಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ, ನಟ ಪ್ರಕಾಶ್ ರಾಜ್ ಮಾತ್ರ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ನಡೆಸಿದ ವಿಶೇಷ ಸಂವಾದದಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Published: 16th August 2023 12:54 PM | Last Updated: 16th August 2023 03:29 PM | A+A A-

ಪ್ರಕಾಶ್ ರಾಜ್
ಮಂಗಳವಾರ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ದೇಶದಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ, ನಟ ಪ್ರಕಾಶ್ ರಾಜ್ ಮಾತ್ರ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ನಡೆಸಿದ ವಿಶೇಷ ಸಂವಾದದಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ತನ್ನ ನೆಲದ ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಬಳಲುತ್ತಿರುವಾಗ ತಾವು ಸಂತೋಷಪಡಲು ಸಾಧ್ಯವಿಲ್ಲ'. 'ಇದು ನನಗೆ ಸಾಕಷ್ಟು ಅಸಂತೋಷದ ಸ್ವಾತಂತ್ರ್ಯ ದಿನವಾಗಿದೆ. ನನ್ನ ನೆಲದ ಮಕ್ಕಳು ಪೋಷಕರಿಲ್ಲದೆ ಸಂಕಷ್ಟಕ್ಕೀಡಾಗಿರುವಾಗ ನಾನು ಸ್ವಾತಂತ್ರ್ಯೋತ್ಸವನ್ನು ಆಚರಿಸಲು ಸಾಧ್ಯವಿಲ್ಲ. ಇದು ಮಣಿಪುರ ಮತ್ತು ದೇಶದಾದ್ಯಂತ ಕಂಡುಬರುತ್ತಿರುವ ಸದ್ಯದ ದೃಶ್ಯವಾಗಿದೆ' ಎಂದಿದ್ದಾರೆ.
'ಅಲ್ಪಸಂಖ್ಯಾತರು ನಿರಂತರ ಕಿರುಕುಳಕ್ಕೊಳಗಾಗುತ್ತಿದ್ದಾರೆ ಮತ್ತು ಅಪರಾಧಿಗಳನ್ನು ಶ್ಲಾಘಿಸಲಾಗುತ್ತಿದೆ'. ಹೀಗಿರುವಾಗ ನಿಜವಾದ ಸ್ವಾತಂತ್ರ್ಯ ಎಲ್ಲಿಯೂ ಕಂಡುಬರುವುದಿಲ್ಲ. 'ಇತ್ತೀಚಿನ ದಿನಗಳಲ್ಲಿ, ದೇಶಪ್ರೇಮವು ನಿರ್ಲಜ್ಜ ಮಂದಿಗೆ ಆಶ್ರಯವಾಗಿದೆ. ನಕಲಿ ದೇಶಭಕ್ತಿ ಈಗ ಆತಂಕಕಾರಿಯಾಗಿ ಸಾಮಾನ್ಯವಾಗಿಬಿಟ್ಟಿದೆ. ಆತ್ಮಸಾಕ್ಷಿಯುಳ್ಳ ಯಾರಾದರೂ ನಮ್ಮ ಸ್ವಾತಂತ್ರ್ಯವನ್ನು ಹೇಗೆ ಆಚರಿಸಬಹುದು?' ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸುದೀಪ್.. ಇನ್ನು ಮುಂದೆ ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ: ಪ್ರಕಾಶ್ ರಾಜ್
ನಾಗರಿಕರು ತಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಮತ್ತು ಭೂಮಿಗೆ ಶಾಂತಿಯನ್ನು ತರುವ ಸಮಯ ಇದಾಗಿದೆ. 'ನಾವು ಒಟ್ಟಾಗಿ ನಿಲ್ಲುವ ಮತ್ತು ಉತ್ತರ ಹುಡುಕುವ ಸಮಯ ಇದಾಗಿದೆ. ವಿಧಾನಸಭೆಯಲ್ಲಿರುವ ನಮ್ಮ ನಾಯಕರು ನಮಗೆ ಉತ್ತರದಾಯಿಗಳು, ಅವರ್ಯಾರೂ ತಮ್ಮ ಜವಾಬ್ದಾರಿಯನ್ನು ಚರ್ಚೆ ಅಥವಾ ಚುನಾವಣಾ ಪ್ರಚಾರದಂತೆ ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.
ಪ್ರಕಾಶ್ ರಾಜ್ ಅವರು ಪವನ್ ಕಲ್ಯಾಣ್ ಅವರ OG, ಮಹೇಶ್ ಬಾಬು ಅಭಿನಯದ ಗುಂಟೂರ್ ಕಾರಮ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ದೇವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.