ದ್ವೇಷಕ್ಕೆ ಮಾತ್ರ ದ್ವೇಷ ಕಾಣಿಸುವುದು: ನಾ ಹೇಳಿದ್ದು 'ಮಲಯಾಳಿ ಚಾಯ್​ವಾಲಾ' ಬಗ್ಗೆ; ಪ್ರಕಾಶ್ ರಾಜ್ ಸ್ಪಷ್ಟನೆ

ಅನ್​ಅಕಾಡೆಮಿ ಟ್ರೋಲಿಗರಿಗೆ ಗೊತ್ತಿರುವುದು ಚಾಯ್ ವಾಲಾ ಮಾತ್ರ. ಬೇರೆಯವರ ಬಗ್ಗೆ ತಿಳಿದುಕೊಂಡಿಲ್ಲ. ನಾವು ಹೆಮ್ಮೆ ಪಡುವಂತಹ 1960ರಲ್ಲಿ ನಮ್ಮ ದೇಶದವರೇ ಆದ ಮಲಯಾಳಂನ ಚಾಯ್​ವಾಲಾ ಒಬ್ಬರ ಸ್ಫೂರ್ತಿದಾಯಕ ಸ್ಟೋರಿ ಇದೆ.
ಪ್ರಕಾಶ್ ರಾಜ್
ಪ್ರಕಾಶ್ ರಾಜ್

ಬೆಂಗಳೂರು: ‘ಚಂದ್ರನಿಂದ ಬಂದ ಮೊದಲ ಚಿತ್ರ’ ಎಂದು ಚಾಯ್​ವಾಲಾನ ವ್ಯಂಗ್ಯಚಿತ್ರವೊಂದನ್ನು ನಟ ಪ್ರಕಾಶ್ ರಾಜ್ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್​ ಆಗಿದ್ದಲ್ಲದೆ ವಿವಾದಾತ್ಮಕವಾಗಿ ಪರಿಣಮಿಸಿ ತೀವ್ರ ಟೀಕೆಗೂ ಒಳಗಾಗಿದೆ.

ಈ ಸಂಬಂಧ ಮತ್ತೊಂದು ಟ್ವೀಟ್ ಮಾಡಿ, ಸ್ಪಷ್ಟನೆ ನೀಡಿರುವ ಅವರು,‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್​ವಾಲಾರನ್ನು ಸಂಭ್ರಮಿಸುವ ಆರ್ಮ್​ಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?’ ಎಂದು ಪ್ರಶ್ನಿಸಿರುವ ಪ್ರಕಾಶ್ ರಾಜ್​, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದಾರೆ.

ಅನ್​ಅಕಾಡೆಮಿ ಟ್ರೋಲಿಗರಿಗೆ ಗೊತ್ತಿರುವುದು ಚಾಯ್ ವಾಲಾ ಮಾತ್ರ. ಬೇರೆಯವರ ಬಗ್ಗೆ ತಿಳಿದುಕೊಂಡಿಲ್ಲ. ನಾವು ಹೆಮ್ಮೆ ಪಡುವಂತಹ 1960ರಲ್ಲಿ ನಮ್ಮ ದೇಶದವರೇ ಆದ ಮಲಯಾಳಂನ ಚಾಯ್​ವಾಲಾ ಒಬ್ಬರ ಸ್ಫೂರ್ತಿದಾಯಕ ಸ್ಟೋರಿ ಇದೆ. ನೀವು ಈ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಪ್ಲೀಸ್​ ಇದನ್ನು ಓದಿ ಎಂದು ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.

ಪ್ರಕಾಶ್​ ರಾಜ್ ನಿನ್ನೆ ಮಾಡಿದ್ದ ಆ ಪೋಸ್ಟ್​ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದರು. ಇಂದೂ ಟೀಕೆಗಳು ಮುಂದುವರಿದಿದ್ದು, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಪ್ರಕಾಶ್​ ರಾಜ್​ ಈ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com