ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಪಾದ ಮುಟ್ಟಿ ನಮಸ್ಕರಿಸಿದೆ.. ಏಕೆ ಎಂದರೆ....
'ಸನ್ಯಾಸಿ' ಅಥವಾ 'ಯೋಗಿ'ಯ ಪಾದಗಳಿಗೆ ಆ ವ್ಯಕ್ತಿಯ ವಯಸ್ಸನ್ನು ಲೆಕ್ಕಿಸದೆ ನಮಸ್ಕರಿಸುವುದು ನನ್ನ ಅಭ್ಯಾಸ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
Published: 22nd August 2023 10:11 AM | Last Updated: 22nd August 2023 05:11 PM | A+A A-

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದು ನಮಸ್ಕರಿಸಿದ ರಜನಿಕಾಂತ್
ಚೆನ್ನೈ: 'ಸನ್ಯಾಸಿ' ಅಥವಾ 'ಯೋಗಿ'ಯ ಪಾದಗಳಿಗೆ ಆ ವ್ಯಕ್ತಿಯ ವಯಸ್ಸನ್ನು ಲೆಕ್ಕಿಸದೆ ನಮಸ್ಕರಿಸುವುದು ನನ್ನ ಅಭ್ಯಾಸ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ ರಾಜಧಾನಿ ಲಖನೌಗೆ ಭೇಟಿ ನೀಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಎದ್ದ ವಿವಾದ ಕುರಿತು ಚೆನ್ನೈನಲ್ಲಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸನ್ಯಾಸಿಯಾಗಲಿ, ಯೋಗಿಯಾಗಲಿ ನನಗಿಂತ ವಯಸ್ಸಿನಲ್ಲಿ ಕಿರಿಯರಾದರೂ ಅವರ ಕಾಲಿಗೆ ಬೀಳುವುದು ನನ್ನ ಅಭ್ಯಾಸ, ಅದನ್ನೇ ಯೋಗಿ ಆದಿತ್ಯನಾಥ್ ಅವರನ್ನು ಕಂಡಾಗ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಕಾಲು ಮುಟ್ಟಿ ನಮಸ್ಕರಿಸಿದ ಸೂಪರ್ ಸ್ಟಾರ್ ರಜನಿಕಾಂತ್; ವಿಡಿಯೋ ವೈರಲ್
ರಜನಿಕಾಂತ್ ನಡೆಗೆ ತಮಿಳು ನಾಡಿನಲ್ಲಿ ಸಹ ತೀವ್ರ ವಿವಾದ ಕೇಳಿಬಂತು. 72 ವರ್ಷದ ನಟ ತಮಗಿಂತ ವಯಸ್ಸಿನಲ್ಲಿ ಕಿರಿಯ ಯುಪಿ ಸಿಎಂ ಅವರ ಪಾದಗಳನ್ನು ಸ್ಪರ್ಶಿಸುವುದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದರು.
ಇದಕ್ಕೆಲ್ಲಾ ಉತ್ತರಿಸಿರುವ ರಜನಿಕಾಂತ್ ತಮ್ಮ ಇತ್ತೀಚಿನ ಜೈಲರ್ ಚಿತ್ರವನ್ನು ಜನರು ಯಶಸ್ವಿಗೊಳಿಸಿರುವುದಕ್ಕೆ ಧನ್ಯವಾದ ಹೇಳಿದರು. 2024ರ ಲೋಕಸಭೆ ಚುನಾವಣೆ ಕುರಿತ ಪ್ರಶ್ನೆಗೆ, ರಾಜಕೀಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.
#WATCH | Tamil Nadu | Actor Rajinikanth reaches his residence in Chennai after concluding his visit to Uttar Pradesh.
— ANI (@ANI) August 21, 2023
On being asked if it was a political visit, Actor Rajinikanth says "I went there to meet my friends, it was a wonderful visit." pic.twitter.com/NZbSb3IeZJ