ಹರಿಯಾಣ: ನುಹ್ ನಲ್ಲಿ ಶೋಭಾಯಾತ್ರೆ, ಹೃದಯಾಘಾತದಿಂದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದುರ್ಮರಣ

ರಿಯಾಣದ ನುಹ್ ನಲ್ಲಿ ಸರ್ವ ಜಾತಿಯ ಹಿಂದೂ ಮಹಾಪಂಚಾಯತ್‌ ಸೋಮವಾರ ಶೋಭಾ ಯಾತ್ರೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ  ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಕರ್ತವ್ಯ ನಿರತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನುಹ್: ಹರಿಯಾಣದ ನುಹ್ ನಲ್ಲಿ ಸರ್ವ ಜಾತಿಯ ಹಿಂದೂ ಮಹಾಪಂಚಾಯತ್‌ ಸೋಮವಾರ ಶೋಭಾ ಯಾತ್ರೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ  ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಕರ್ತವ್ಯ ನಿರತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಉತಾವರ ಗ್ರಾಮದ ನಿವಾಸಿ ಹಕ್ಮುದ್ದೀನ್ (47) ಎಂದು ಗುರುತಿಸಲಾಗಿದೆ. ಅವರನ್ನು ಬದ್ಕಲಿ ಚೌಕ್‌ನಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ 12:30 ರ ಸುಮಾರಿಗೆ, ಸಬ್ ಇನ್ಸ್‌ಪೆಕ್ಟರ್ ಹಕ್ಮುದ್ದೀನ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು  ಮೃತಪಟ್ಟಿದ್ದಾರೆ ಎಂದು ನಗೀನಾ ಪೊಲೀಸ್ ಠಾಣೆಯ ಠಾಣಾಧಿಕಾರಿ ರತ್ತನ್ ಲಾಲ್ ತಿಳಿಸಿದ್ದಾರೆ.

ಸರ್ವ್ ರಾಷ್ಟ್ರೀಯ ಹಿಂದೂ ಮಹಾಪಂಚಾಯತ್‌ನ ಶೋಭಾ ಯಾತ್ರೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನುಹ್‌ನಲ್ಲಿ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.ಜುಲೈ 31 ರಂದು ಸಂಭವಿಸಿದ ಹಿಂಸಾಚಾರ ಹಾಗೂ ಸೆಪ್ಟೆಂಬರ್ 3-7ರ ಅವಧಿಯಲ್ಲಿ  ನಡೆಯಲಿರುವ ಜಿ 20 ಶೆರ್ಪಾ ಗ್ರೂಪ್‌ನ ಸಭೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರಣದಿಂದ ಆಡಳಿತ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು. ಆದಾಗ್ಯೂ, ಶೋಭಾ ಯಾತ್ರೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com