ಮಧ್ಯ ಪ್ರದೇಶ: ಅಸ್ವಸ್ಥ ಚಿರತೆ ಮೇಲೆ ಕುಳಿತು ಸವಾರಿಗೆ ಗ್ರಾಮಸ್ಥರು ಯತ್ನ!

ಅಸ್ವಸ್ಥಗೊಂಡಿರುವ ಚಿರತೆಯನ್ನು ಸುತ್ತುವರೆದ ಗ್ರಾಮಸ್ಥರ ಗುಂಪು, ಅದರ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿರುವ ಮತ್ತು ಅದರ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
ಅಸ್ವಸ್ಥ ಚಿರತೆ ಮೇಲೆ ಕುಳಿತು ಸವಾರಿಗೆ ಯತ್ನಸಿದ ಗ್ರಾಮಸ್ಥರು
ಅಸ್ವಸ್ಥ ಚಿರತೆ ಮೇಲೆ ಕುಳಿತು ಸವಾರಿಗೆ ಯತ್ನಸಿದ ಗ್ರಾಮಸ್ಥರು

ಇಂದೋರ್: ಅಸ್ವಸ್ಥಗೊಂಡಿರುವ ಚಿರತೆಯನ್ನು ಸುತ್ತುವರೆದ ಗ್ರಾಮಸ್ಥರ ಗುಂಪು, ಅದರ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿರುವ ಮತ್ತು ಅದರ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಮಂಗಳವಾರ ದೇವಾಸ್‌ನ ಇಕ್ಲೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ, ಚಿಕಿತ್ಸೆ ನೀಡುತ್ತಿದ್ದಾರೆ.

ಚಿರತೆಯನ್ನ ಸುತ್ತುವರಿದು, ಅದರ ಮೇಲೆ ಆನೆ ಮೇಲೆ ಕುಳಿತಂತೆ ಕುಳಿತು ಕಪಿಚೇಷ್ಟೆ ಆಡಿದ್ದಾರೆ. ಸುಮಾರು 15ರಿಂದ 20 ಜನರು ಚಿರತೆ ಬಳಿ ಸುತ್ತುವರಿದು ಅದರ ಜೊತೆಗೆ ಹುಚ್ಚಾಟ ಮೆರೆದಿದ್ದಾರೆ. 

ಅಸ್ವಸ್ಥತೆಯಿಂದ ಬಳಲುತ್ತಿರುವ ಚಿರತೆಯನ್ನು ಬುಧವಾರ ಇಂದೋರ್ ನಗರದ ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದೋರ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಇಕ್ಲೇರಾ ಗ್ರಾಮದಲ್ಲಿ ಮಂಗಳವಾರ ಚಿರತೆಯನ್ನು ರಕ್ಷಿಸಲಾಗಿದೆ ಎಂದು ದೇವಾಸ್‌ನಲ್ಲಿರುವ ಅರಣ್ಯ ಇಲಾಖೆಯ ಖೋನಿ ಅಭಯಾರಣ್ಯದ ಅಧೀಕ್ಷಕ ವಿಕಾಸ್ ಮಹೋರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com