ಇದು ಅಮೃತಕಾಲ, ನಾವು ದಿನದ 24 ಗಂಟೆ ಕೆಲಸ ಮಾಡಬೇಕು: ಪ್ರಧಾನಿ ಮೋದಿ

ಪ್ರಸಕ್ತ ಅವಧಿಯಲ್ಲಿ ಭಾರತ ಎತ್ತರಕ್ಕೆ ಏರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಸಕ್ತ ಅವಧಿಯಲ್ಲಿ ಭಾರತ ಎತ್ತರಕ್ಕೆ ಏರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ವಿಕಸಿತ ಭಾರತ@2047ರ ದೂರದೃಷ್ಟಿಗೆ ಯುವಕರು ಕೊಡುಗೆ ನೀಡಬಹುದಾಗಿರುವ ಅಭಿಯಾನದ ವೇದಿಕೆಯಾಗಿರುವ ವಿಕಸಿತ ಭಾರತ್@2047: ಯುವ ಧ್ವನಿ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಮಾತನಾಡಿದ್ದಾರೆ.
 
ಈ ವೇಳೆ ದೇಶದ ಯುವಕರಿಗೆ ಕರೆ ನೀಡಿರುವ ಪ್ರಧಾನಿ ಮೋದಿ,  ನಾಯಕತ್ವವನ್ನು ದೇಶಕ್ಕೆ ನೀಡುವುದು ಹಾಗೂ ಉಳಿದೆಲ್ಲಕ್ಕಿಂತಲೂ ರಾಷ್ಟ್ರೀಯ ಹಿತಾಸಕ್ತಿಯನ್ನು ಆದ್ಯತೆಯನ್ನಾಗಿಟ್ಟುಕೊಳ್ಳುವ ರೀತಿಯಲ್ಲಿ ತಯಾರಾಗಿರಬೇಕು ಎಂದು ಹೇಳಿದ್ದಾರೆ. 

ಭಾರತದ ಯುವಜನತೆಯ ಶಕ್ತಿ ಬದಲಾವಣೆಯ ಪ್ರತಿನಿಧಿ ಹಾಗೂ ಬದಲಾವಣೆಯ ಫಲಾನುಭವಿ ಎರಡೂ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. "ಯಾವುದೇ ರಾಷ್ಟ್ರದ ಜೀವಿತದಲ್ಲಿ, ಇತಿಹಾಸ ಅದರ ಅಭಿವೃದ್ಧಿ ಪಯಣದಲ್ಲಿ ಅತ್ಯುತ್ತಮ ಹೆಜ್ಜೆ ಇಡುವುದಕ್ಕೆ ಸಮಯವನ್ನು ಒದಗಿಸುತ್ತದೆ. ಭಾರತ ಈಗ ಅಮೃತಕಾಲದಲ್ಲಿದೆ ಹಾಗೂ ಈ ಅವಧಿ ಭಾರತಕ್ಕೆ ಅಭೂತಪೂರ್ವವಾದ ಜಿಗಿತಕ್ಕೆ ಸೂಕ್ತವಾಗಿದೆ. ಆದ್ದರಿಂದ ಅಮೃತಕಾಲದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮೋದಿ ಕರೆ ನೀಡಿದ್ದಾರೆ. 

ದೇಶಾದ್ಯಂತ ರಾಜಭವನಗಳಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಸಂಸ್ಥೆಗಳ ಮುಖ್ಯಸ್ಥರು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮೋದಿ ಮಾತನಾಡಿದರು.

“ದೇಶದ ಪ್ರಜೆಗಳಾದ ನಮಗೆ ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗಿದೆ, ನಮ್ಮ ಮುಂದೆ 25 ವರ್ಷಗಳ ಅಮೃತ ಕಾಲವಿದೆ, ನಾವು ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕು. ದೇಶಕ್ಕೆ ನಾಯಕತ್ವ ನೀಡುವ, ಎಲ್ಲಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವ ರೀತಿಯಲ್ಲಿ ಯುವ ಪೀಳಿಗೆಯನ್ನು ತಯಾರು ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com