ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಇಡಿಯಿಂದ ಮೂರನೇ ಸಮನ್ಸ್: ಜನವರಿ 3ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

ಈಗ ರದ್ದಾಗಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಮುಖ್ಯಮಂತ್ರಿಗೆ ಮೂರನೇ ಸಮನ್ಸ್ ನೀಡಿದೆ. ಜನವರಿ 3 ರಂದು ಏಜೆನ್ಸಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಲಾಗಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಈಗ ರದ್ದಾಗಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಮುಖ್ಯಮಂತ್ರಿಗೆ ಮೂರನೇ ಸಮನ್ಸ್ ನೀಡಿದೆ. ಜನವರಿ 3 ರಂದು ಏಜೆನ್ಸಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಲಾಗಿದೆ.

ಮೂರನೆಯ ಸಮನ್ಸ್ ಕೇಜ್ರಿವಾಲ್ ಮುಂದೆ ಇರುವ ಆಯ್ಕೆಗಳನ್ನು ಕಡಿಮೆ ಮಾಡುತ್ತದೆ. ಹಿಂದಿನ ಎರಡು ಸಂದರ್ಭಗಳಲ್ಲಿ ಅವರು ಮಾಡಿದ ರೀತಿಯಲ್ಲಿ ಅದನ್ನು ನಿರ್ಲಕ್ಷಿಸಿದರೆ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ (NBW) ಹೊರಡಿಸಲು ಇಡಿ ನ್ಯಾಯಾಲದ ಮೆಟ್ಟಿಲೇರಬಹುದು. ವ್ಯಕ್ತಿಯನ್ನು ಬಂಧಿಸಲು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಜಾಮೀನು ರಹಿತ ವಾರೆಂಟ್ ಪೊಲೀಸರಿಗೆ ಅಧಿಕಾರ ನೀಡುತ್ತದೆ. ಕೇಜ್ರಿವಾಲ್ ಕೂಡಾ ಸಮನ್ಸ್  ನ್ನುನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಮತ್ತು ನಿರೀಕ್ಷಣಾ ಜಾಮೀನು ಪಡೆಯಬಹುದು.

ಕೇಜ್ರಿವಾಲ್  ಪಂಜಾಬ್ ನಲ್ಲಿ 10 ದಿನಗಳ ವಿಪಸ್ಸನಾ ಅಧಿವೇಶನಕ್ಕೆ ಡಿಸೆಂಬರ್ 19 ರಂದು ಹೊರಡುವ ಕೆಲವು ದಿನಗಳ ಮೊದಲು ಎರಡನೇ ಸಮನ್ಸ್ ಬಂದಿತು. ಡಿಸೆಂಬರ್ 21 ರಂದು ಇಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಇಡಿ ಮುಂದೆ ಹಾಜರಾಗುವುದಕ್ಕಿಂತ ಧ್ಯಾನವನ್ನು ಆರಿಸಿಕೊಂಡರು. ಇಡಿ ಅಧಿಕಾರಿಗಳು ಎರಡನೇ ಸಮನ್ಸ್  ನೀಡುವ ಮೊದಲು ವಿಪಸ್ಸನಾಗೆ ದೆಹಲಿಯಲ್ಲಿ ಇಲ್ಲ, ವಿಪಸನಾಕ್ಕೆ ತೆರಳಿದ್ದಾರೆ ಎಂದು ಘೋಷಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com