ಅಮೃತಸರ: ಹೆರಾಯಿನ್ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್‌ಎಫ್, ಮೂವರು ಯುವಕರ ಬಂಧನ
ಅಮೃತಸರ: ಗಡಿ ಭದ್ರತಾ ಪಡೆ ಪಂಜಾಬ್‌ನ ಅಮೃತಸರದಲ್ಲಿ ಹೆರಾಯಿನ್ ಕಳ್ಳಸಾಗಣೆಯೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಿದೆ. ಕಳ್ಳಸಾಗಣೆದಾರರಿಂದ ಒಟ್ಟು 525 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಬಿಎಸ್‌ಎಫ್ ತಿಳಿಸಿದೆ.
ಭಾನುವಾರ ಅಮೃತಸರ ಜಿಲ್ಲೆಯ ಧಾನೋ ಕಲಾನ್ ಗ್ರಾಮದ ಬಳಿ ಕಳ್ಳಸಾಗಣೆ ಚಟುವಟಿಕೆಗಳ ಬಗ್ಗೆ ಬಿಎಸ್ ಎಫ್ ನ ವಿಶೇಷ ಮಾಹಿತಿ ಆಧಾರದ ಮೇಲೆ, ವಿಶೇಷ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. 12-15 ರ ಸುಮಾರಿನಲ್ಲಿ ಹೊಲದಲ್ಲಿ ಇಬ್ಬರು ಶಂಕಿತ ಕಳ್ಳಸಾಗಣೆದಾರರ ಚಲನವಲನವನ್ನು ಡ್ರೋನ್ ನಲ್ಲಿ ಗಮನಿಸಲಾಯಿತು. ತಕ್ಷಣವೇ ಇಬ್ಬರೂ ಕಳ್ಳಸಾಗಣೆದಾರರನ್ನು ಬಂಧಿಸಲಾಯಿತು. ಅವರು ಹೆರಾಯಿನ್ ರವಾನೆಯೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಬಿಎಸ್ಎಫ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
"ಇಬ್ಬರೂ ಕಳ್ಳಸಾಗಾಣಿಕೆದಾರರು ನೀಡಿದ ಮಾಹಿತಿ ಆಧಾರದ ಮೇಲೆ ಮೂರನೇ ಕಳ್ಳಸಾಗಣೆದಾರನನ್ನು ಸಹ ಬಂಧಿಸಲಾಯಿತು. ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಕಳ್ಳಸಾಗಣೆದಾರರ ಮತ್ತೊಂದು ಪ್ರಯತ್ನವನ್ನು ಜಾಗರೂಕತೆಯಿಂದ ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದ್ದಾಗಿ ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ