ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಮ್ಮದೇ ಸರ್ಕಾರದ ಬಜೆಟ್ ಅನ್ನು ಟೀಕಿಸಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಇಂದು ಮಂಡಿಸಿರುವುದು ಬಜೆಟ್ಟಾ ಅಥವಾ ದಿನಸಿ ಅಂಗಡಿ ಮಾಲೀಕನ ರಸೀದಿಯಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

"ಇದು ಒಂದು ಮಂಡನೆ ಮಾಡಿರುವ ಬಜೆಟ್? ಇದು ದಿನಸಿ ಅಂಗಡಿ ಮಾಲೀಕನ ಬಿಲ್- ಒಂದು ಯೋಗ್ಯ ಬಜೆಟ್ ತನ್ನ ಉದ್ದೇಶಗಳೇನು ಎಂಬುದನ್ನು ಬಹಿರಂಗಪಡಿಸಬೇಕು. ಅದು ಜಿಡಿಪಿ ಬೆಳವಣಿಗೆ ದರವಾಗಿದ್ದರೆ, ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ತಂತ್ರಗಾರಿಕೆ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಿ" ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com