ಪತಿ ನಾರಾಯಣಮೂರ್ತಿ, ಅಳಿಯ ಯುಕೆ ಪ್ರಧಾನಿ ರಿಷಿ ಸುನಕ್, ಮಗಳು ಅಕ್ಷತಾಗೆ ಸುಧಾ ಮೂರ್ತಿ ನೀಡಿದ 4 ಸಲಹೆಗಳಿವು!

ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು  ತಮ್ಮ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರ ಅಳಿಯ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಹಾಗೂ ಮಗಳು ಅಕ್ಷತಾ ಮೂರ್ತಿ ಅವರಿಗೆ ನಾಲ್ಕು ಅಂಶಗಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಸುಧಾ ಮೂರ್ತಿ
ಸುಧಾ ಮೂರ್ತಿ

ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಅವರು  ತಮ್ಮ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರ ಅಳಿಯ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಹಾಗೂ ಮಗಳು ಅಕ್ಷತಾ ಮೂರ್ತಿ ಅವರಿಗೆ ನಾಲ್ಕು ಅಂಶಗಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ, ವಿವಾದಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸದಾ ಪ್ರಚಲಿತದಲ್ಲಿರುವ ಜನರು ಯಾವಾಗಲೂ ವಿವಾದಗಳನ್ನು ಸಹ ಹೊಂದಿರುತ್ತಾರೆ ಎಂದು ಸುಧಾಮೂರ್ತಿ ಹೇಳಿದ್ದಾರೆ. ಈ ಹಿನ್ನೆಲೆ, ಇಂತಹವರು ಸೈದ್ಧಾಂತಿಕವಾಗಿ, ನೈತಿಕವಾಗಿ ಸರಿಯಾಗಿರಬೇಕು ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸುಧಾಮೂರ್ತಿ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ, ತಾಳ್ಮೆಯನ್ನು ಮುಖ್ಯ ಅವಶ್ಯಕತೆಯಾಗಿ ಮತ್ತು ಒಬ್ಬರ ಮಿತಿಗಳನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆಯನ್ನು ಸಹ ಪಟ್ಟಿ ಮಾಡಿದ್ದಾರೆ. ಈ ಮಧ್ಯೆ, ಸಾಮಾನ್ಯ ಜನರಿಗೂ ಸಲಹೆ ನೀಡಿದ ಸುಧಾ ಮೂರ್ತಿ, ಪ್ರತಿಯೊಬ್ಬರಿಗೂ ಸಾಮರ್ಥ್ಯವಿದೆ, ಆದರೆ ಮಿತಿಗಳಿವೆ ಎಂದೂ ಹೇಳಿದ್ದಾರೆ.

ಮಹಿಳೆಯರಿಗೂ ಸಹ ಸುಧಾ ಮೂರ್ತಿ ಸಲಹೆಯೊಂದನ್ನು ನೀಡಿದ್ದಾರೆ, ವಿಶೇಷವಾಗಿ ತಮ್ಮ ವೃತ್ತಿಯೊಂದಿಗೆ ವೈಯಕ್ತಿಕ ಜೀವನವನ್ನು ಸಹ ನಿಭಾಯಿಸಿಕೊಂಡು ಹೋಗುವವರಿಗೆ ಹೀಗೆ ಹೇಳಿದ್ದಾರೆ ನೋಡಿ.. "ನಾನು ಎಲ್ಲಾ ಭಾರತೀಯ ಮಹಿಳೆಯರಿಗೆ ಹೇಳಲು ಬಯಸುವುದು, ಒಮ್ಮೆ ಮಕ್ಕಳು ಬಂದರೆ, ಅವರು ಆದ್ಯತೆಯಾಗುತ್ತಾರೆ, ನೀವು ಮತ್ತೆ (ನಿಮ್ಮ ವೃತ್ತಿಗೆ) ಸೇರಿದಾಗ, ನೀವು ಅದೇ ಮಟ್ಟಕ್ಕೆ ಸೇರುವುದಿಲ್ಲ. ಆದರೆ ನೆನಪಿಡಿ, ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ. ನಿಮ್ಮ ಉತ್ಸಾಹವೇ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಮತ್ತು ಉತ್ತಮ ಬೆಂಬಲ ವ್ಯವಸ್ಥೆಯೂ ಅಗತ್ಯ ಎಂದು ಸುಧಾ ಮೂರ್ತಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com