ಅಸ್ಸಾಂ: ಬಾಲ್ಯ ವಿವಾಹ ಪ್ರಕರಣದಲ್ಲಿ 2,044 ಮಂದಿಯ ಬಂಧನ

ಅಸ್ಸಾಂ ನಲ್ಲಿ ಬಾಲ್ಯ ವಿವಾಹ ಪ್ರಕರಣದಲ್ಲಿ 2,044 ಮಂದಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಬಾಲ್ಯ ವಿವಾಹ
ಬಾಲ್ಯ ವಿವಾಹ
Updated on

ನವದೆಹಲಿ: ಅಸ್ಸಾಂ ನಲ್ಲಿ ಬಾಲ್ಯ ವಿವಾಹ ಪ್ರಕರಣದಲ್ಲಿ 2,044 ಮಂದಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಹಿಂದೂ-ಮುಸ್ಲಿಮ್ ಸಮುದಾಯಗಳೂ ಸೇರಿದಂತೆ ಯಾರೇ ಇಂತಹ ವಿವಾಹಗಳನ್ನು ನಡೆಸಿದರೂ ಅದನ್ನು ಅಕ್ರಮ ಎಂದು ಘೋಷಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

8,000 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಆದರೆ 2,044 ಮಂದಿ ಮಾತ್ರ ಬಂಧನಕ್ಕೊಳಗಾಗಿದ್ದಾರೆ. ಬಾಲ್ಯ ವಿವಾಹದ ವಿರುದ್ಧದ ಅಭಿಯಾನ ಮುಂದಿನ 3-4 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ ಹಾಗೂ ಆ ಬಳಿಕ ಜಿಲ್ಲಾ ಮಟ್ಟದಲ್ಲಿ ಡೇಟಾ ಲಭ್ಯವಾಗಲಿದೆ ಎಂದು ಪೊಲೀಸ್ ಡಿಜಿಪಿ ಜಿಪಿ ಸಿಂಗ್ ಹೇಳಿದ್ದಾರೆ. 

ಶುಕ್ರವಾರ ಸಂಜೆ ವರೆಗೆ ಅತಿ ಹೆಚ್ಚು ಅಂದರೆ 137 ಮಂದಿಯನ್ನು ಬಿಸ್ವನಾಥ್ ಜಿಲ್ಲೆಯಲ್ಲಿ ಬಂಧಿಸಲಾಗಿದ್ದರೆ, ಧುಬ್ರಿಯಲ್ಲಿ 126 ಮಂದಿಯನ್ನು ಬಂಧಿಸಲಾಗಿದೆ. ಬಕ್ಸಾ ಜಿಲ್ಲೆಯಲ್ಲಿ 120 ಮಂದಿ, ಬರ್ಪೆಟಾದಲ್ಲಿ 114 ಮಂದಿ ಕೊಕ್ರಾಜ್ ಹರ್ ನಲ್ಲಿ 96 ಮಂದಿಯನ್ನು ಬಂಧಿಸಲಾಗಿದೆ. 

ಬಾಲ್ಯ ವಿವಾಹಕ್ಕೆ ಮುಂದಾಗಿದ್ದ ಮಕ್ಕಳ ಕುಟುಂಬದವರಷ್ಟೇ ಅಲ್ಲದೇ ಪೊಲೀಸರು ವಿವಾಹವನ್ನು ನಡೆಸಿಕೊಟ್ಟ 51 ಪುರೋಹಿತರು ಹಾಗೂ ಕಾಜಿಗಳನ್ನೂ ಸಹ ಬಂಧಿಸಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ. ಕೆಲವು ಪ್ರಕರಣಗಳಲ್ಲಿ ಕುಟುಂಬ ಸದಸ್ಯರು, ಮಕ್ಕಳ ಕಲ್ಯಾಣ ಸೊಸೈಟಿ ಸ್ಥಳೀಯರು, ಪೊಲೀಸ್ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಈ ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com