ಪ್ರಧಾನಿ ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ: ಸಮೀಕ್ಷೆ
ಅಮೆರಿಕ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಶೇ.78 ರ ರೇಟಿಂಗ್ ನೊಂದಿಗೆ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದಾರೆ.
Published: 04th February 2023 05:10 PM | Last Updated: 04th February 2023 05:28 PM | A+A A-

ಪ್ರಧಾನಿ ಮೋದಿ
ನವದೆಹಲಿ: ಅಮೆರಿಕ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಶೇ.78 ರ ರೇಟಿಂಗ್ ನೊಂದಿಗೆ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದಾರೆ. ಒಟ್ಟು 22 ಜಾಗತಿಕ ನಾಯಕರನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದ್ದು, ಪ್ರಧಾನಿ ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ರೇಟಿಂಗ್ ಪ್ರಕಾರ ಅಮೆರಿಕಾ ಅಧ್ಯಕ್ಷ ಜೋ- ಬೈಡನ್ ಶೇ.40 ರಷ್ಟು ರೇಟಿಂಗ್ ಪಡೆದಿದ್ದರೆ, ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ. 68ರ ರೇಟಿಂಗ್ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸ್ವಿಸ್ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ. 62ರ ರೇಟಿಂಗ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಶೇ. 58 ರಷ್ಟು ರೇಟಿಂಗ್ ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಕೆನಡಾದ ಜಸ್ಟಿನ್ ಟ್ರುಡೊ ಶೇ. 40 ರೇಟಿಂಗ್ ಗಳಿಸಿ ಏಳು ಮತ್ತು 8ನೇ ಸ್ಥಾನ ಗಳಿಸಿದ್ದಾರೆ.
22 ದೇಶಗಳ ಪೈಕಿ ನಾರ್ವೇಜಿಯನ್ ಪ್ರಧಾನಿ ಜೊನಾಸ್ ಗಹರ್ ಸ್ಟೋರ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸಿಯೋಕ್-ಯೌಲ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಪಟ್ಟಿಯಲ್ಲಿ ಕೊನೆಯ ಮೂರರಲ್ಲಿ ಸ್ಥಾನ ಪಡೆದಿದ್ದಾರೆ.