ಪಂಜಾಬ್ ಗಡಿಯಲ್ಲಿ ಮತ್ತೊಂದು ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ

ಪಂಜಾಬ್ ನ ಇಂಡೋ-ಪಾಕ್ ಗಡಿಯಲ್ಲಿ ಭಾರತೀಯ ಸೇನೆ ಬುಧವಾರ ಮತ್ತೊಂದು ಪಾಕಿಸ್ತಾನದಿಂದ ಹಾರಿಬಂದ ಡ್ರೋನ್ ಅನ್ನು ಹೊಡೆದುರುಳಿಸಿದ್ದು, ಡ್ರೋನ್ ಅವಶೇಷಗಳು ಪಾಕಿಸ್ತಾನ ಗಡಿಯೊಳಗೆ ಬಿದ್ದಿದೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಂಜಾಬ್ ನ ಇಂಡೋ-ಪಾಕ್ ಗಡಿಯಲ್ಲಿ ಭಾರತೀಯ ಸೇನೆ ಬುಧವಾರ ಮತ್ತೊಂದು ಪಾಕಿಸ್ತಾನದಿಂದ ಹಾರಿಬಂದ ಡ್ರೋನ್ ಅನ್ನು ಹೊಡೆದುರುಳಿಸಿದ್ದು, ಡ್ರೋನ್ ಅವಶೇಷಗಳು ಪಾಕಿಸ್ತಾನ ಗಡಿಯೊಳಗೆ ಬಿದ್ದಿದೆ ಎನ್ನಲಾಗಿದೆ.

ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ "ರಾಕ್ಷಸ" ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬುಧವಾರ ಹೊಡೆದುರುಳಿಸಿದೆ. ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಬಿಎಸ್‌ಎಫ್ ಯೋಧರು ಡ್ರೋನ್ ಅನ್ನು ಗುಂಡುಹಾರಿಸಿ ಹೊಡೆದುರುಳಿಸಿದ್ದು, ಗುಂಡಿನ ದಾಳಿಗೆ ತುತ್ತಾದ ಡ್ರೋನ್ ಪಾಕಿಸ್ತಾನ ಗಡಿಯೊಳಗೆ ಬಿದ್ದಿದೆ. ಹೀಗಾಗಿ ಅದನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಈ ಶಂಕಿತ ಡ್ರೋನ್ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯೊಳಗೆ ಬಿದ್ದಿದ್ದು,  ಪಂಜಾಬ್‌ನ ಅಮೃತಸರ ಸೆಕ್ಟರ್‌ನ ಗಡಿ ಪೋಸ್ಟ್ 'ಬಾಬಾಪಿರ್' ಬಳಿ ಫೆಬ್ರವರಿ 7-8 ರ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com