ದೆಹಲಿ ಅಬಕಾರಿ ನೀತಿ ಕೇಸು: ಸಿಬಿಐಯಿಂದ ಹೈದರಾಬಾದ್ ಮೂಲದ ಚಾರ್ಟೆರ್ಡ್ ಅಕೌಂಟೆಂಟ್ ಬಂಧನ
ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿ ಹೈದರಾಬಾದ್ ಮೂಲದ ಸಗಟು ಮತ್ತು ಚಿಲ್ಲರೆ ಪರವಾನಗಿಗಳು ಮತ್ತು ದೆಹಲಿ ಅಬಕಾರಿ ನೀತಿಯಡಿ ಮಾಲೀಕರಿಗೆ ಅಕ್ರಮ ಲಾಭವನ್ನು ಉಂಟುಮಾಡಿದ ಆರೋಪದ ಮೇಲೆ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಅವರನ್ನು ಸಿಬಿಐ ಬಂಧಿಸಿದೆ.
Published: 08th February 2023 10:09 AM | Last Updated: 08th February 2023 03:22 PM | A+A A-

ಸಿಬಿಐ
ನವದೆಹಲಿ: ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿ ಹೈದರಾಬಾದ್ ಮೂಲದ ಸಗಟು ಮತ್ತು ಚಿಲ್ಲರೆ ಪರವಾನಗಿಗಳು ಮತ್ತು ದೆಹಲಿ ಅಬಕಾರಿ ನೀತಿಯಡಿ ಮಾಲೀಕರಿಗೆ ಅಕ್ರಮ ಲಾಭವನ್ನು ಉಂಟುಮಾಡಿದ ಆರೋಪದ ಮೇಲೆ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಅವರನ್ನು ಸಿಬಿಐ ಬಂಧಿಸಿದೆ. ಇದರ ಪರಿಣಾಮವಾಗಿ ದೆಹಲಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ.
ಸಿಬಿಐ ಮೂಲಗಳ ಪ್ರಕಾರ ಗೋರಂಟ್ಲಾ ಅವರನ್ನು ಇಂದು ರೌಸ್ ಅವೆನ್ಯೂದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಅವರನ್ನು ಕಸ್ಟಡಿಗೆ ಪಡೆಯುವಂತೆ ಸಂಸ್ಥೆ ಕೋರಲಿದೆ.
ಸಿಬಿಐ ಈಗಾಗಲೇ ತನ್ನ ಮೊದಲ ಚಾರ್ಜ್ ಶೀಟ್ ನ್ನು ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಇನ್ನೂ ತನಿಖೆಗಳು ನಡೆಯುತ್ತಿವೆ. ವಿಶೇಷ ನ್ಯಾಯಾಲಯವು ಇದನ್ನು ಗಮನಕ್ಕೆ ತೆಗೆದುಕೊಂಡಿದೆ. ಅಬಕಾರಿ ನೀತಿಯ ಅನುಷ್ಠಾನದ ಜವಾಬ್ದಾರಿಯನ್ನು ಏಜೆನ್ಸಿ ಮೂಲಕ ಜಾರಿಗೆ ತರಲು ಹೊಣೆಹೊತ್ತುಕೊಂಡ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರು ಇತರ 14 ಮಂದಿಯೊಂದಿಗೆ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿಲ್ಲ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಂಸ್ಥೆ ಜನವರಿ 14ರಂದು ಅವರ ಕಚೇರಿಗೆ ತಲುಪಿತ್ತು.
ಇದನ್ನೂ ಓದಿ: ಮದ್ಯ ಹಗರಣ: ವಕೀಲರ ಶುಲ್ಕಕ್ಕಾಗಿ ರೂ.25.25 ಕೋಟಿ ವ್ಯಯಿಸಿದ ದೆಹಲಿ ಸರ್ಕಾರ
ಸಿಬಿಐ ನವೆಂಬರ್ 25 ರಂದು ತನ್ನ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಹೆಸರಿಸಿದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಜಿಎನ್‌ಸಿಟಿಡಿ) ಸರ್ಕಾರದ ಇಬ್ಬರು ಅಧಿಕಾರಿಗಳು ಸೇರಿದಂತೆ ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಐವರನ್ನು ಹೆಸರಿಸಲಾಗಿದೆ.
ವಿಜಯ್ ನಾಯರ್, ಅಭಿಷೇಕ್ ಬೋನಪಲ್ಲಿ, ಅರುಣ್ ಆರ್.ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಆಗಿನ ಅಬಕಾರಿ ಉಪ ಆಯುಕ್ತರಾಗಿದ್ದ ಕುಲದೀಪ್ ಸಿಂಗ್ ಮತ್ತು ಆಗಿನ ಸಹಾಯಕರಾಗಿದ್ದ ಅಬಕಾರಿ ಇಲಾಖೆ ಆಯುಕ್ತ ನರೇಂದರ್ ಸಿಂಗ್ ಅವರ ಹೆಸರುಗಳು ಆರೋಪಪಟ್ಟಿಯಲ್ಲಿವೆ.