ಜೋಶಿಮಠ ಬಿಕ್ಕಟ್ಟು: ಮನೆಗಳಲ್ಲಿ ಮತ್ತೆ ಹೊಸ ಬಿರುಕು, ಸ್ಥಳೀಯರಲ್ಲಿ ಮನೆಮಾಡಿದ ಆತಂಕ

ಭೂಮಿ ಕುಸಿದ ಪರಿಣಾಮವಾಗಿ ಈಗಾಗಲೇ ಸಂಕಷ್ಟಕ್ಕೊಳಗಾಗಿದ್ದ ಉತ್ತರಾಖಂಡದ ಜೋಶಿಮಠದಲ್ಲಿ ವಸತಿ ಕಟ್ಟಡಗಳಲ್ಲಿನ ಬಿರುಕುಗಳು ಅಗಲವಾಗುತ್ತಿರುವುದು ಹಾಗೂ ಹೆಚ್ಚುತ್ತಿರುವ ಬಿರುಕುಗಳ ಜತೆಗೆ ಇನ್ನೂ ಐದಾರು ಮನೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡಿದ್ದು, ಇಲ್ಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
ಉತ್ತರಾಖಂಡದ ಜೋಶಿಮಠದಲ್ಲಿ ಮತ್ತೆ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು
ಉತ್ತರಾಖಂಡದ ಜೋಶಿಮಠದಲ್ಲಿ ಮತ್ತೆ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು

ಜೋಶಿಮಠ: ಭೂಮಿ ಕುಸಿದ ಪರಿಣಾಮವಾಗಿ ಈಗಾಗಲೇ ಸಂಕಷ್ಟಕ್ಕೊಳಗಾಗಿದ್ದ ಉತ್ತರಾಖಂಡದ ಜೋಶಿಮಠದಲ್ಲಿ ವಸತಿ ಕಟ್ಟಡಗಳಲ್ಲಿನ ಬಿರುಕುಗಳು ಅಗಲವಾಗುತ್ತಿರುವುದು ಹಾಗೂ ಹೆಚ್ಚುತ್ತಿರುವ ಬಿರುಕುಗಳ ಜತೆಗೆ ಇನ್ನೂ ಐದಾರು ಮನೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡಿದ್ದು, ಇಲ್ಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ಈ ಪ್ರದೇಶಕ್ಕೆ ಆಗಮಿಸಿ ಮನೆಗಳನ್ನು ಬುಧವಾರ ಪರಿಶೀಲಿಸಿದರು.

ಕ್ರ್ಯಾಕೊಮೀಟರ್‌ಗಳನ್ನು ಅಳವಡಿಸಿರುವ ಮನೆಗಳಲ್ಲಿ ಹಳೆಯ ಬಿರುಕುಗಳ ಗಾತ್ರ ಹೆಚ್ಚಾಗಿದೆ ಎಂದು ಖುರಾನಾ ಗುರುವಾರ ಹೇಳಿದ್ದಾರೆ.

ಜನವರಿಯಲ್ಲಿ ಮನೋಹರ್ ಬಾಗ್ ವಾರ್ಡ್‌ನ ಹೊಲಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಸಂತ್ರಸ್ತ ಹೊಲವೊಂದರ ಮಾಲೀಕ ಸೂರಜ್ ಕಪರ್ವಾನ್ ಮಾತನಾಡಿ, ಜಿಲ್ಲಾಡಳಿತವು ಮಣ್ಣು ಮತ್ತು ಪ್ಲಾಸ್ಟಿಕ್‌ನಿಂದ ಆ ಬಿರುಕುಗಳನ್ನು ತುಂಬಿದೆ ಎಂದಿದ್ದಾರೆ.

ಜನವರಿ 20ರ ನಂತರ ಪವಿತ್ರ ನಗರದಲ್ಲಿ ಹೊಸ ಬಿರುಕುಗಳು ಕಾಣಿಸಿಕೊಳ್ಳುವುದು ನಿಂತಿದೆ. ಆದರೆ, ಇದೀಗ ಮತ್ತೆ ಪ್ರಾರಂಭವಾಗಿದೆ. ಇದು ಸ್ಥಳೀಯರು ಮತ್ತು ಆಡಳಿತದ ಚಿಂತೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಮನೋಹರ್ ಬಾಗ್ ಮತ್ತು ಸಿಂಘಧಾರ್ ವಾರ್ಡ್‌ನ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ಜೋಶಿಮಠದ ಸಿಂಘಧಾರ್ ವಾರ್ಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಹರಿಯುತ್ತಿದ್ದ ನೈಸರ್ಗಿಕ ಹೊಳೆ ಏಕಾಏಕಿ ಬತ್ತಿ ಹೋಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com