ಬ್ರಹ್ಮೋಸ್ ಕ್ಷಿಪಣಿಯೊಂದರಿಂದಲೇ 2026 ರಕ್ಕೆ ಭಾರತದ ರಕ್ಷಣಾ ರಫ್ತು 3 ಬಿಲಿಯನ್ ಡಾಲರ್ ಗೆ ಏರಿಕೆ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ 2024-25 ರ ವೇಳೆಗೆ ಭಾರತ ರಕ್ಷಣಾ ರಫ್ತು ಮೌಲ್ಯವನ್ನು 1.5 ಬಿಲಿಯನ್ ನಿಂದ 5 ಬಿಲಿಯನ್ ಡಾಲರ್ ಗೆ ಏರಿಕೆ ಮಾಡುವ ಮಹಾತ್ವಾಕಾಂಕ್ಷೆಯ ಗುರಿಹೊಂದಿದ್ದಾರೆ. 
ಬ್ರಹ್ಮೋಸ್
ಬ್ರಹ್ಮೋಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2024-25 ರ ವೇಳೆಗೆ ಭಾರತ ರಕ್ಷಣಾ ರಫ್ತು ಮೌಲ್ಯವನ್ನು 1.5 ಬಿಲಿಯನ್ ನಿಂದ 5 ಬಿಲಿಯನ್ ಡಾಲರ್ ಗೆ ಏರಿಕೆ ಮಾಡುವ ಮಹಾತ್ವಾಕಾಂಕ್ಷೆಯ ಗುರಿಹೊಂದಿದ್ದಾರೆ. 

2026 ರ ವೇಳೆಗೆ ಬ್ರಹ್ಮೋಸ್ ಒಂದರಿಂದಲೇ ಭಾರತದ ಆಮದು ರಫ್ತು 3 ಬಿಲಿಯನ್ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೂಪರ್ ಸೋನಿಕ್ ಕ್ರೂಸ್ ಕ್ಷಿಪಣಿಗಳಲ್ಲಿ ವಿಶೇಷತೆ ಹೊಂದಿರುವ ಬ್ರಹ್ಮೋಸ್ ಕಾರ್ಪೊರೇಷನ್ ಭಾರತದ ರಕ್ಷಣಾ ರಫ್ತನ್ನು ಹೆಚ್ಚಿಸಲು ಮುಂದಾಗಿದ್ದು, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತವೇ ಉತ್ಪಾದಿಸಿರುವ ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ವಹಿಸಿವೆ.

ಭಾರತ- ರಷ್ಯಾ ಜಂಟಿ ಉದ್ಯಮ ಭಾರತೀಯ ಸೇನಾ ಪಡೆಗಳ ಯುದ್ಧದ ಸಾಮರ್ಥ್ಯವನ್ನು ಹೆಚ್ಚಿಸಿದ್ದು, 2023 ರ ಅಂತ್ಯದ ವೇಳೆಗೆ ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನು ಫಿಲಿಫೈನ್ಸ್ ಗೆ ರಫ್ತು ಮಾಡಲಿದ್ದು,  ಇನ್ನೂ ಹೆಚ್ಚಿನ ರಫ್ತು ಬೇಡಿಕೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ: ಅಧ್ಯಕ್ಷ ಜೋ ಬೈಡನ್
 
ಬ್ರಹ್ಮೋಸ್ ಏರೋಸ್ಪೇಸ್ ನ ಸಿಇಒ ಹಾಗೂ ಎಂಡಿ ಅತುಲ್ ಡಿ ರಾಣೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಪ್ರತಿಯೊಬ್ಬರೂ ಬ್ರಹ್ಮೋಸ್ ನಲ್ಲಿ ಆಸಕ್ತಿ ಹೊಂದಿದ್ದಾರೆ. ಇಡೀ ವಿಶ್ವವೇ ನಮ್ಮತ್ತ ನೋಡುತ್ತಿದೆ. ಆದರೆ ನಾವು ಭಾರತ ಹಾಗೂ ರಷ್ಯಾಗೆ ಒಪ್ಪಿಗೆಯಾಗುವಂತಹ ರಾಷ್ಟ್ರಗಳಿಗೆ ಮಾತ್ರ ಮಾರಾಟ ಮಾಡಬಹುದಾಗಿದೆ. ಈ ಪೈಕಿ ಫಿಲಿಪೈನ್ಸ್ ಮೊದಲ ಆದ್ಯತೆಯಾಗಿದೆ, ಮಧ್ಯಪ್ರಾಚ್ಯವೂ ಅತ್ಯಂತ ಆಸಕ್ತಿ ಹೊಂದಿದೆ ಎಂದು ಹೇಳಿದ್ದಾರೆ.
 
(ಬ್ರಹ್ಮೋಸ್) ನ ಮಹಾನಿರ್ದೇಶಕ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ವಿಜ್ಞಾನಿಯೂ ಆಗಿರುವ ರಾಣೆ,  ಒಂದೊಂದು ಪ್ರಕರಣದಲ್ಲಿ ಮಾತುಕತೆಗಳು ಪ್ರಗತಿಯ ಹಂತದಲ್ಲಿದೆ. ಮುಂದಿನ ವಾರ ಯುಎಇ ನಲ್ಲಿರುವ ಅಂತಾರಾಷ್ಟ್ರೀಯ ರಕ್ಷಣಾ ಪ್ರದರ್ಶನ ಹಾಗೂ ಕಾನ್ಫರೆನ್ಸ್ ನಲ್ಲಿ ಕೆಲವು ಮಾತುಕತೆಗಳು ನಡೆಯಲಿವೆ ಎಂದು ಹೇಳಿದ್ದಾರೆ. 

ಪ್ರಧಾನಿಗಳು ಕಠಿಣವಾದ ಟಾರ್ಗೆಟ್ ನ್ನು ನೀಡಿದ್ದಾರೆ. ಅದನ್ನು ನಮಗೆ ನಾವೇ ಇನ್ನಷ್ಟು ಕಠಿಣವಾದ ಟಾರ್ಗೆಟ್ ಮಾಡಿಕೊಂಡಿದ್ದೇವೆ, ಟಾರ್ಗೆಟ್ ನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com