ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ: ಅಧ್ಯಕ್ಷ ಜೋ ಬೈಡನ್

ಭಾರತದೊಂದಿಗಿನ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಮೋದಿ-ಜೋ ಬೈಡನ್ ಮಾತುಕತೆ
ಮೋದಿ-ಜೋ ಬೈಡನ್ ಮಾತುಕತೆ

ನವದೆಹಲಿ: ಭಾರತದೊಂದಿಗಿನ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ 44 ರಾಜ್ಯಗಳಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದ್ದು, ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಿಕೊಳ್ಳುವುದಕ್ಕೆ ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿಗೆ ಜೋ ಬೈಡನ್ ಹೇಳಿದ್ದಾರೆ.

ಬೋಯಿಂಗ್ ಹಾಗೂ ಏರ್ ಇಂಡಿಯಾ ಒಪ್ಪಂದಕ್ಕೆ ಮುಂದಾಗಿದ್ದು ಈ ಒಪ್ಪಂದದ ಪ್ರಕಾರ ವಿಮಾನಸಂಸ್ಥೆ 190 B737 MAX, 20 B787, ಮತ್ತು 10 B777X  USD 34 ಶತಕೋಟಿ ಮೌಲ್ಯದ ಒಟ್ಟು 220 ಫರ್ಮ್ ಆರ್ಡರ್ ನಲ್ಲಿ ಖರೀದಿಸಲಿದೆ.

ಈ ಐತಿಹಾಸಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಜೋ ಬೈಡನ್ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದರು. ಈ ಖರೀದಿಯ ಒಪ್ಪಂದದಿಂದ 44 ರಾಜ್ಯಗಳ ಜನರಿಗೆ ಉದ್ಯೋಗ ಸಿಗಲಿದೆ ಈ ಪೈಕಿ ಉದ್ಯೋಗ ಪಡೆಯುವ ಹಲವು ಮಂದಿಗೆ ನಾಲ್ಕು ವರ್ಷಗಳ ಡಿಗ್ರಿ ಅಗತ್ಯವಿರುವಿರುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ.

ಏರ್ ಇಂಡಿಯಾದ ಆರ್ಡರ್ ಡಾಲರ್ ಮೌಲ್ಯದಲ್ಲಿ ಬೋಯಿಂಗ್ ನ ಮೂರನೇ ಅತಿ ದೊಡ್ಡ ಮಾರಾಟವಾಗಿರಲಿದ್ದು, ವಿಮಾನ ಮಾರಾಟದ ಸಂಖ್ಯೆಯಲ್ಲಿ 2 ನೇ ಅತಿ ದೊಡ್ದದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com