ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಐಎಸ್‌ಐ ಗೂಢಚಾರರಿಗೆ ಚೀನಾ ಗಡಿ ಕುರಿತು ಮಾಹಿತಿ ನೀಡುತ್ತಿದ್ದ ಯೋಧನ ಸೆರೆ!

ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ನಿಯೋಜಿಸಲಾದ ಐಎಸ್‌ಐ ಏಜೆಂಟ್‌ಗೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಯೋಧ ಸಿಕ್ಕಿಬಿದ್ದಿದ್ದಾನೆ.
ಭಾರತೀಯ ಸೇನೆ ಯೋಧ
ಭಾರತೀಯ ಸೇನೆ ಯೋಧ

ನವದೆಹಲಿ: ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ನಿಯೋಜಿಸಲಾದ ಐಎಸ್‌ಐ ಏಜೆಂಟ್‌ಗೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಯೋಧ ಸಿಕ್ಕಿಬಿದ್ದಿದ್ದಾನೆ. 

ಈ ಯೋಧ ಐಎಸ್‌ಐ ಏಜೆಂಟ್‌ಗೆ ಉತ್ತರದ ಗಡಿಯಲ್ಲಿನ ಸೇನಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಚೀನಾ ಮತ್ತು ಭಾರತಕ್ಕೆ ಸೇರಿದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿದ್ದ ಯೋಧನೊಬ್ಬ(ಸಿಗ್ನಲ್​ಮ್ಯಾನ್​) ಅಲ್ಲಿನ ಸೇನಾ ನೆಲೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ರಾಯಭಾರಿ ಕಚೇರಿಯ ಐಎಸ್​ಐ ಏಜೆಂಟ್​ಗೆ ಕೇವಲ 15000 ರೂಪಾಯಿಗೆ ರವಾನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು ಆತನನ್ನು ಬಂಧಿಸಲಾಗಿದೆ. ಸೇನಾ ನಿಯಮಗಳಂತೆ ಆತನ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಿ ಪ್ರಜೆ ಅಬಿದ್ ಹುಸೇನ್ ಅಲಿಯಾಸ್ ನಾಯಕ್ ಅಬಿದ್‌ಗೆ ರಹಸ್ಯ ಮಾಹಿತಿ ನೀಡುತ್ತಿದ್ದಾಗ ಭದ್ರತಾ ಸಂಸ್ಥೆಗಳಿಗೆ ಯೋಧ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಯು ಮಾಹಿತಿ ಹಂಚಿಕೊಳ್ಳಲು ಯೋಧನಿಗೆ 15,000 ರೂ. ನೀಡಿದ್ದನು. ಭಾರತದ ಉತ್ತರದ ಶತ್ರು ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಆಕ್ರಮಣವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಭಾರತೀಯ ಸೇನಾ ಯೋಧ ಪಾಕಿಸ್ತಾನಿ ಗೂಢಚಾರರಿಗೆ ಮಾಹಿತಿಯನ್ನು ರವಾನಿಸುತ್ತಿದ್ದದ್ದು ಆತಂಕಕ್ಕೆ ಕಾರಣವಾಗಿದೆ. 

ಸೇನಾ ಮೂಲಗಳ ಪ್ರಕಾರ, ಯೋಧನ ಬಳಿ ಕೇವಲ ಸೂಕ್ಷ್ಮ ವಿವರಗಳಿದ್ದವು. ಅಂತಹ ಕೃತ್ಯಗಳಿಗೆ ಸೇನೆಯು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಅಲ್ಲದೆ ತಪ್ಪಿತಸ್ಥನನ್ನು ಅವರು ಮರೆಯಲಾಗದ ಶಿಕ್ಷೆಯೊಂದಿಗೆ ಶಿಕ್ಷಿಸುತ್ತೇವೆ. ಶತ್ರುಗಳ ಬೇಹುಗಾರಿಕಾ ಸಂಸ್ಥೆಗೆ ಯೋಧ ನೀಡಿದ ಮಾಹಿತಿಯು ಬಹಳ ಮುಖ್ಯವಾಗಿತ್ತು. ಗೂಢಚಾರರಿಗೆ ನೀಡಲಾದ ದಾಖಲೆಗಳ ಪಟ್ಟಿಯು ಅವನ ಸ್ವಂತ ರಚನೆಯ ಚಟುವಟಿಕೆಗಳ ಜೊತೆಗೆ ಅವನು ಪೋಸ್ಟ್ ಮಾಡಿದ ರಚನೆಯ ಗಾರ್ಡ್ ಡ್ಯೂಟಿ ಪಟ್ಟಿಯನ್ನು ಒಳಗೊಂಡಿತ್ತು. ಸೈನಿಕರ ಸ್ವಂತ ವಾಹನಗಳ ಮಾಹಿತಿಯೊಂದಿಗೆ ಕೋವಿಡ್ ಲಾಕ್‌ಡೌನ್ ದೃಷ್ಟಿಯಿಂದ ವಾಹನಗಳ ಚಲನವಲನದ ಪಟ್ಟಿಯನ್ನು ಸಹ ಸೇನಾ ಯೋಧ ನೀಡಿದ್ದನು.

ಚೀನಾ ಗಡಿಯಲ್ಲಿ ಉಪಗ್ರಹದ ನಿಗಾ ಇಡುವ ಸ್ಥಳವನ್ನು ತಲುಪಲು ಯೋಧ ಪ್ರಯತ್ನಿಸುತ್ತಿದ್ದನೂ ಅದು ಯಶಸ್ವಿಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಆತ ಚೀನಾ ಗಡಿಯಲ್ಲಿ ಕಣ್ಗಾವಲು ರಾಡಾರ್‌ಗಳು ಮತ್ತು ಇತರ ರೀತಿಯ ಉಪಕರಣಗಳ ಸ್ಥಳವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದನು. ಇತ್ತೀಚಿನ ದಿನಗಳಲ್ಲಿ ಯೋಧರು ವಾಸ್ತವವಾಗಿ ಹನಿ-ಟ್ರ್ಯಾಪ್ ಗೆ ಒಳಗಾಗುತ್ತಿದ್ದು ಮಾಹಿತಿ ಹಂಚಿಕೊಳ್ಳುವಂತೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಹನಿ ಟ್ರ್ಯಾಪ್ ಅಥವಾ ಮಾಹಿತಿ ಹೊರತೆಗೆಯಲು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com