ನವದೆಹಲಿ: ರೂ.16,692 ಕೋಟಿ ಜಿಎಸ್ ಟಿ ಪರಿಹಾರದ ಬಾಕಿ ಹಣ ಪಾವತಿ- ನಿರ್ಮಲಾ ಸೀತಾರಾಮನ್

ಜೂನ್ ತಿಂಗಳ 16,982 ಕೋಟಿ ರೂ. ಸೇರಿದಂತೆ ಎಲ್ಲಾ ಜಿಎಸ್‌ಟಿ ಪರಿಹಾರ ಬಾಕಿ ಮೊತ್ತವನ್ನು ಪಾವತಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. 
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಜೂನ್ ತಿಂಗಳ 16,982 ಕೋಟಿ ರೂ. ಸೇರಿದಂತೆ ಎಲ್ಲಾ ಜಿಎಸ್‌ಟಿ ಪರಿಹಾರ ಬಾಕಿ ಮೊತ್ತವನ್ನು ಪಾವತಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. 

ಜಿಎಸ್‌ಟಿ ಸಮಿತಿಯ 49 ನೇ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಪಾನ್ ಮಸಾಲಾ ಮತ್ತು ಗುಟ್ಕಾ ಉದ್ಯಮದಿಂದ ತೆರಿಗೆ ವಂಚನೆ ಪರಿಶೀಲನೆ ಮತ್ತು ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಕುರಿತು  ಸಚಿವರ ಗುಂಪಿನ ವರದಿ ಕುರಿತು ಸಮಿತಿಯಲ್ಲಿ ಚರ್ಚಿಸಲಾಗಿದೆ ಎಂದರು. 

ದ್ರವ ಬೆಲ್ಲ, ಪೆನ್ಸಿಲ್ ಶಾರ್ಪನರ್ ಮತ್ತು ಕೆಲವು ಟ್ರ್ಯಾಕಿಂಗ್ ಸಾಧನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಜಿಎಸ್ ಟಿ ಸಮಿತಿ ಕಡಿಮೆ ಮಾಡಿದ್ದು,  ನಿಗದಿತ ದಿನಾಂಕದ ನಂತರ ವಾರ್ಷಿಕ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವ ವಿಳಂಬ ಶುಲ್ಕವನ್ನು ತರ್ಕಬದ್ಧಗೊಳಿಸಲು ನಿರ್ಧರಿಸಿದೆ ಎಂದು ಹಣಕಾಸು ಸಚಿವರು ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com