ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದ ಪ್ರಕರಣದ ವಿವಾದದಲ್ಲಿ 100 ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸ್
ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ದೇವಾಲಯ ಪ್ರವೇಶಿಸಿದ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Published: 19th February 2023 06:19 PM | Last Updated: 19th February 2023 06:19 PM | A+A A-

ಎಫ್ಐಆರ್ (ಸಾಂಕೇತಿಕ ಚಿತ್ರ)
ಭೋಪಾಲ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ದೇವಾಲಯ ಪ್ರವೇಶಿಸಿದ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2 ವಿವಾದಗಳಲ್ಲಿ ಈ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಒಂದು ಪ್ರಕರಣ ಶನಿವಾರ ಸನವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಛಪ್ರಾ ಗ್ರಾಮದಲ್ಲಿ ನಡೆದಿದ್ದು, ಮಹಾಶಿವರಾತ್ರಿ ಅಂಗವಾಗಿ ಜನರು ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದಾಗ ವರದಿಯಾಗಿದೆ ಉಭಯ ಕಡೆಯವರೂ ಪರಸ್ಪರ ಕಲ್ಲು ತೂರಾಟ ನಡೆಸಿದ್ದರು.
ಇದೇ ರೀತಿಯ ಘಟನೆ ಶನಿವಾರದಂದು ಕಸರ್ವಾಡ ಪೊಲೀಸ್ ಠಾಣೆಯಲ್ಲಿ ನಡೆದಿತ್ತು.
ಛಪ್ರಾ ಗ್ರಾಮದಲ್ಲಿ ದಲಿತ ಸಮುದಾಯದವರು ಮೂರು ಬೇರೆ ಸಮುದಾಯದವರು ನಿರ್ಮಿಸಿರುವ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದಾಗ ಈ ವಿವಾದ ಉಂಟಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ಹೇಳಿದ್ದಾರೆ.
ಉಭಯ ಸಮುದಾಯದವರೂ ಸಹ ಈ ವಿವಾದದ ಬೆನ್ನಲ್ಲೇ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆಯೇ ಸಣ್ಣ ಪ್ರಮಾಣದ ಘರ್ಷಣೆ ಉಂಟಾಗಿದ್ದು, ದಲಿತ ಸಮುದಾಯದವರು ದೇವಾಲಯದ ಬಳಿ ಇರುವ ಭೂಮಿಯಲ್ಲಿ ಬಿಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲು ಮರ ಕಡಿಯಲು ಮುಂದಾಗಿದ್ದಾಗಿನಿಂದಲೂ ಈ ವಿವಾದ ಉಂಟಾಗಿತ್ತು. ಜಿಲ್ಲಾ ಹಾಗೂ ಪೊಲೀಸ್ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿವಾದ ಬಗೆಹರಿಸಿದರು.