ಸಾವರ್ಕರ್ ಪ್ರವಾಸೋದ್ಯಮ ಸರ್ಕ್ಯೂಟ್ ನಿರ್ಮಿಸುತ್ತೇವೆ: ಮಹಾ ಸಚಿವ ಲೋಧಾ
ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಗೌರವಾರ್ಥ ಭವ್ಯವಾದ ಥೀಮ್ ಪಾರ್ಕ್ ಮತ್ತು ವಸ್ತುಸಂಗ್ರಹಾಲಯವನ್ನು ನಾಸಿಕ್ ಜಿಲ್ಲೆಯ ಅವರ ಹುಟ್ಟೂರಾದ ಭಾಗೂರ್ ಗ್ರಾಮದಲ್ಲಿ ನಿರ್ಮಿಸಲಾಗುವುದು...
Published: 26th February 2023 05:04 PM | Last Updated: 26th February 2023 05:04 PM | A+A A-

ವೀರ್ ಸಾವರ್ಕರ್
ನಾಸಿಕ್: ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಗೌರವಾರ್ಥ ಭವ್ಯವಾದ ಥೀಮ್ ಪಾರ್ಕ್ ಮತ್ತು ವಸ್ತುಸಂಗ್ರಹಾಲಯವನ್ನು ನಾಸಿಕ್ ಜಿಲ್ಲೆಯ ಅವರ ಹುಟ್ಟೂರಾದ ಭಾಗೂರ್ ಗ್ರಾಮದಲ್ಲಿ ನಿರ್ಮಿಸಲಾಗುವುದು ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಭಾನುವಾರ ಹೇಳಿದ್ದಾರೆ.
ಸಾವರ್ಕರ್ ಅವರ ಪುಣ್ಯತಿಥಿ ಅಂಗವಾಗಿ ಭಾಗೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು,
ವೀರ್ ಸಾವರ್ಕರ್ ಅವರ ಜೀವನ ಮತ್ತು ಆಲೋಚನೆಗಳು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.
ಇದನ್ನು ಓದಿ: ಈರುಳ್ಳಿ ಬೆಲೆ ತೀವ್ರ ಕುಸಿತ: 512 ಕೆಜಿ ಈರುಳ್ಳಿ ಮಾರಾಟದಿಂದ ರೈತನಿಗೆ ಸಿಕ್ಕಿದ್ದು ಕೇವಲ 2.49 ರೂ.!
ಮಹಾರಾಷ್ಟ್ರ ಸರ್ಕಾರವು ಇಡೀ ಜಗತ್ತಿಗೆ ಅವರ ಜೀವನ ಮತ್ತು ಕೆಲಸದ ಬಗ್ಗೆ ತಿಳಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ. ನಾವು ವೀರ್ ಸಾವರ್ಕರ್ ಅವರ ಗೌರವಾರ್ಥ ಅಂತರರಾಷ್ಟ್ರೀಯ ಗುಣಮಟ್ಟದ ಭವ್ಯವಾದ ಥೀಮ್ ಪಾರ್ಕ್ ಮತ್ತು ಮ್ಯೂಸಿಯಂ ಅನ್ನು ನಿರ್ಮಿಸುತ್ತೇವೆ" ಲೋಧಾ ಹೇಳಿದ್ದಾರೆ.
ಥೀಮ್ ಪಾರ್ಕ್ ಅನ್ನು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿರ್ವಹಿಸುತ್ತದೆ ಮತ್ತು ಅದರ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.