ಜಮ್ಮು ಮತ್ತು ಕಾಶ್ಮೀರ: ಯೋಧರಿಂದಲೇ ರೈಫಲ್ ಕಿತ್ತುಕೊಂಡು ಪರಾರಿಯಾದ ಶಂಕಿತರು, ತೀವ್ರ ಶೋಧ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿದ್ದು, ಕರ್ತವ್ಯ ನಿರತ ಯೋಧರಿಂದಲೇ ಶಂಕಿತರು ರೈಫಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
Published: 01st January 2023 03:35 PM | Last Updated: 01st January 2023 03:35 PM | A+A A-

ಸಂಗ್ರಹ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿದ್ದು, ಕರ್ತವ್ಯ ನಿರತ ಯೋಧರಿಂದಲೇ ಶಂಕಿತರು ರೈಫಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಪುಲ್ವಾಮಾದ ರಾಜ್‌ಪೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಿಆರ್‌ಪಿಎಫ್ ಯೋಧರ ಬಳಿ ಇದ್ದ ರೈಫಲ್ ಅನ್ನು ಕಿತ್ತುಕೊಂಡ ಪರಾರಿಯಾಗಿದ್ದಾರೆ.
J&K | Incident of weapon snatching with security personnel reported from Rajpora area of Pulwama, say police. Area cordoned off.
Details awaited. pic.twitter.com/zAfzcN0Ydd— ANI (@ANI) January 1, 2023
ರಾಜ್‌ಪೋರಾ ಪ್ರದೇಶದ ಬೆಲ್ಲೋ ಗ್ರಾಮದಲ್ಲಿ ಸಿಆರ್‌ಪಿಎಫ್ ಸೈನಿಕರಿಂದ ಅಪರಿಚಿತ ವ್ಯಕ್ತಿಯೊಬ್ಬ ರೈಫಲ್ ಅನ್ನು ಕಸಿದುಕೊಂಡಿದ್ದಾನೆ. ಈ ರೈಫಲ್ ಸಿಆರ್‌ಪಿಎಫ್ ಪಡೆ 183 ಬೆಟಾಲಿಯನ್‌ಗೆ ಸೇರಿದ್ದಾಗಿದ್ದು, ಇದೀಗ ಶಂಕಿತರ ಹೆಡೆಮುರಿ ಕಟ್ಟಲು ಸೇನೆ ಘಟನಾ ಪ್ರದೇಶವನ್ನು ಸುತ್ತುವರೆದಿದ್ದು, ನಾಕಾಬಂದಿ ಹಾಕಿ ತೀವ್ರ ಶೋಧ ನಡೆಸುತ್ತಿದೆ.