ಬಿಹಾರ ಸಿಎಂ ನಿತೀಶ್ ಕುಮಾರ್ ಒಟ್ಟು ಆಸ್ತಿ ಮೌಲ್ಯ ಕೇವಲ 75. 53 ಲಕ್ಷ!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದು, ಅವರ ಸ್ಥಿರ ಮತ್ತು ಚರಾಸ್ಥಿ ಮೌಲ್ಯ ರೂ. 75. 53 ಲಕ್ಷವಾಗಿದೆ. ವರ್ಷದ ಹಿಂದೆ ಘೋಷಿಸಿಕೊಂಡಿದ್ದಕ್ಕಿಂತ ಕೇವಲ ಈ ಬಾರಿ 18,000 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಸಿಎಂ ನಿತೀಶ್ ಕುಮಾರ್
ಸಿಎಂ ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದು, ಅವರ ಸ್ಥಿರ ಮತ್ತು ಚರಾಸ್ಥಿ ಮೌಲ್ಯ ರೂ. 75. 53 ಲಕ್ಷವಾಗಿದೆ. ವರ್ಷದ ಹಿಂದೆ ಘೋಷಿಸಿಕೊಂಡಿದ್ದಕ್ಕಿಂತ ಕೇವಲ ಈ ಬಾರಿ 18,000 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಡಿಸೆಂಬರ್ 31 ರಂದು ಬಿಹಾರ ಮುಖ್ಯಮಂತ್ರಿ ಹಾಗೂ ಸಚಿವರು ಸರ್ಕಾರದ ವೆಬ್ ಸೈಟ್ ನಲ್ಲಿ ತಮ್ಮ ಆಸ್ತಿ ಮೊತ್ತವನ್ನು ಹಂಚಿಕೊಂಡಿದ್ದು, ನಿತೀಶ್ ಕುಮಾರ್ ಕೇವಲ 28,135 ನಗದು ಹೊಂದಿದ್ದರೆ ಸುಮಾರು 51, 856 ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿಯಾಗಿಟ್ಟಿದ್ದಾರೆ.

ಪ್ರತಿ ವರ್ಷದ ಕೊನೆಯ ದಿನದಂದು ಪ್ರತಿಯೊಬ್ಬ ಸಂಪುಟ ಸಚಿವರು ತಮ್ಮ ಆಸ್ತಿಯ ಮೌಲ್ಯವನ್ನು ಘೋಷಿಸಿವುದನ್ನು ನಿತೀಶ್ ಕುಮಾರ್ ಸರ್ಕಾರ ಕಡ್ಡಾಯಪಡಿಸಿದೆ. ಈ ಮಾಹಿತಿ ಪ್ರಕಾರ ಅನೇಕ ಸಚಿವರು ನಿತೀಶ್ ಕುಮಾರ್ ಅವರಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ.

ನಿತೀಶ್ ಕುಮಾರ್ ಸುಮಾರು 16. 68 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ 58. 85 ಲಕ್ಷ ರೂ. ಮೌಲ್ಯದ ಚರಾಸ್ಥಿ ಹೊಂದಿದ್ದಾರೆ. ನವದೆಹಲಿಯ ದ್ವಾರಕಾದಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com