ಭಾರತ್ ಜೋಡೋ ಯಾತ್ರೆಗೆ ಸಂಜಯ್ ರಾವುತ್ ಮೆಚ್ಚುಗೆ; 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಪ್ರತಿಪಕ್ಷಗಳ ನಾಯಕ?

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಅವರು ಭಾನುವಾರ ಸಾಮ್ನಾದ ತಮ್ಮ ಸಾಪ್ತಾಹಿಕ ಅಂಕಣದಲ್ಲಿ, ಭಾರತ್ ಜೋಡೋ ಯಾತ್ರೆ ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಅವರು ಭಾನುವಾರ ಸಾಮ್ನಾದ ತಮ್ಮ ಸಾಪ್ತಾಹಿಕ ಅಂಕಣದಲ್ಲಿ, ಭಾರತ್ ಜೋಡೋ ಯಾತ್ರೆ ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

ಸಂಜಯ್ ರಾವುತ್ ತಮ್ಮ ಅಂಕಣದಲ್ಲಿ ಭಾರತವು ಸಂಕುಚಿತ ಮನಸ್ಸಿನ ಜನರ ಆಡಳಿತದ ಹಿಡಿತದಲ್ಲಿರುವಾಗ, ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ಮೂಲಕ ಕನ್ಯಾಕುಮಾರಿಯಿಂದ ದೆಹಲಿಯವರೆಗೆ 2,800 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಅವರ ಯಾತ್ರೆ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ ಎಂದಿದ್ದಾರೆ.

ರಾಹುಲ್ ಗಾಂಧಿಯವರ ಟೀ ಶರ್ಟ್ ಟಾಕ್ ಆಫ್ ದಿ ಟೌನ್ ಆಗಿದೆ. 'ಕಡಿಮೆ ತಾಪಮಾನದಲ್ಲಿಯೂ, ರಾಹುಲ್ ಗಾಂಧಿ ಅವರು ಕೇವಲ ಟಿ-ಶರ್ಟ್ ಧರಿಸಿರುತ್ತಾರೆ ಮತ್ತು ಪತ್ರಕರ್ತರು ಅದರ ಹಿಂದಿನ ಕಾರಣವನ್ನು ಸಹ ಕೇಳುತ್ತಾರೆ. ಈ ವೇಳೆ, 'ಈ ಬಗ್ಗೆ ತಮ್ಮನ್ನು ಉತ್ತರ ಕೇಳುವ ಬದಲು, ಪತ್ರಕರ್ತರು ಹಾಗೂ ಆಡಳಿತ ಪಕ್ಷವು ರೈತ ಮತ್ತು ಕಾರ್ಮಿಕರನ್ನು ಕೇಳಬೇಕು. ಏಕೆಂದರೆ, ಅವರು ಕೂಡ ಯಾವುದೇ ಸರಿಯಾದ ಉಣ್ಣೆಯ ಬಟ್ಟೆಗಳಿಲ್ಲದೆ ತಂಪಾದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಹೇಳುತ್ತಾರೆ. ಈ ಯಾತ್ರೆಯು ರಾಹುಲ್ ಗಾಂಧಿ ನಾಯಕತ್ವಕ್ಕೆ ಹೊಸ ಹೊಳಪನ್ನು ತಂದಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

'ಆಡಳಿತ ಪಕ್ಷವು ಯಾತ್ರೆ ಮತ್ತು ರಾಹುಲ್ ಗಾಂಧಿಯವರ ಪ್ರಯತ್ನವನ್ನು ಹೊಗಳುವುದಕ್ಕಿಂತ ಕೆಲವು ಕಾರಣಗಳಿಗಾಗಿ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಬಯಸುತ್ತದೆ. ಈ ವರ್ಷದ ಕೊನೆಯಲ್ಲಿ ನಾವು ರಾಹುಲ್ ಗಾಂಧಿಯವರನ್ನು ಹೊಸ ಅವತಾರದಲ್ಲಿ ಪಡೆದುಕೊಂಡಿದ್ದೇವೆ. ಇದು ದೇಶಕ್ಕೆ ನಿಜವಾದ ಕೊಡುಗೆ. ರಾಹುಲ್ ಗಾಂಧಿ ಸುತ್ತಲಿನ ಈ ಹುರುಪು 2023ರಲ್ಲೂ ಮುಂದುವರಿದರೆ, 2024 ರಲ್ಲಿ ಬದಲಾವಣೆ ಖಚಿತ' ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಸಂಜಯ್ ರಾವುತ್ ಅವರು ರಾಹುಲ್ ಗಾಂಧಿಯನ್ನು ಹೊಗಳುತ್ತಿರುವುದು, ರಾಹುಲ್ ಗಾಂಧಿ ಅವರು ಪ್ರತಿಪಕ್ಷವನ್ನು ಮುನ್ನಡೆಸಬಹುದು ಮತ್ತು ಅವರು ಸಂಯುಕ್ತ ವಿರೋಧ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com