ನಟಿ ತುನಿಷಾ ತಾಯಿಯೇ ಆಕೆಯ ಕತ್ತು ಹಿಸುಕಲು ಯತ್ನಿಸಿದ್ದರು: ವಕೀಲ ಆರೋಪ
ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ನಟಿ, ಮಾಡೆಲ್ ತುನಿಷಾ ಅವರ ಚಿಕ್ಕಪ್ಪನಿಗೆ ಹೆದರುತ್ತಿದ್ದಳು ಎಂದು ಆಕೆಯ ಸಾವಿನ ಪ್ರಕರಣದಲ್ಲಿ ಡಿಸೆಂಬರ್ 25 ರಿಂದ ಜೈಲಿನಲ್ಲಿರುವ ನಟ ಶೀಜಾನ್ ಖಾನ್ ಅವರ ಕುಟುಂಬಸ್ಥರು ಹೇಳಿದ್ದಾರೆ.
Published: 02nd January 2023 05:03 PM | Last Updated: 11th January 2023 11:47 AM | A+A A-

ನಟಿ ತುನಿಷಾಳ ತಾಯಿ
ಮುಂಬೈ: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ನಟಿ, ಮಾಡೆಲ್ ತುನಿಷಾ ಅವರ ಚಿಕ್ಕಪ್ಪನಿಗೆ ಹೆದರುತ್ತಿದ್ದಳು ಎಂದು ಆಕೆಯ ಸಾವಿನ ಪ್ರಕರಣದಲ್ಲಿ ಡಿಸೆಂಬರ್ 25 ರಿಂದ ಜೈಲಿನಲ್ಲಿರುವ ನಟ ಶೀಜಾನ್ ಖಾನ್ ಅವರ ಕುಟುಂಬಸ್ಥರು ಹೇಳಿದ್ದಾರೆ.
ಕ್ರಿಸ್‌ಮಸ್ ಮುನ್ನಾದಿನ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ ತುನಿಷಾ ಶರ್ಮಾ ಚಂಡೀಗಢದ ತನ್ನ ಚಿಕ್ಕಪ್ಪನ ಬಗ್ಗೆ ಭಯಭೀತರಾಗಿದ್ದರು. ಆಕೆಯ ಕತ್ತು ಹಿಸುಕಿ ಸಾಯಿಸುವಂತೆ ಅವರೇ ಪ್ರೇರೇಪಿಸಿದ್ದರು ಎಂದು ಶೀಜಾನ್ ವಕೀಲ ಶೈಲೇಂದ್ರ ಮಿಶ್ರಾ ಮಾಧ್ಯಮಗಳಿಗೆ ಹೇಳಿದ್ದಾರೆ.
ಶೀಜಾನ್ ಅವರ ಸಹೋದರಿಯರು ಕೂಡಾ ತುನಿಷಾ ಬಾಲ್ಯದಿಂದಲೂ ತಾಯಿಗೆ ಹೆದರುತ್ತಿದ್ದರು. ಪ್ರತಿ ಪೈಸೆಗೂ ಬೇಡುತ್ತಿದ್ದರು. ಸಂಜೀವ್ ಕೌಶಲ್ ಹೆಸರು ಕೇಳಿದರೆ ಸಾಕು ತುನಿಷಾ ಭಯಪಡುತ್ತಿದ್ದಳ, ಸಂಜೀವ್ ಕೌಶಲ್ ಪ್ರಚೋದನೆಯಿಂದ ತುನೀಶಾಳ ತಾಯಿ ಆಕೆಯ ಫೋನ್ ಮುರಿದು ಕತ್ತು ಹಿಸುಕಲು ಪ್ರಯತ್ನಿಸಿದ್ದರು ಎಂದು ವಕೀಲ ಶೈಲೇಂದ್ರ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ನಟಿ ತುನಿಷಾ ಸಾವು ಪ್ರಕರಣ: ನಟ ಶೀಜಾನ್ ಖಾನ್ ಗೆ 14 ದಿನ ನ್ಯಾಯಾಂಗ ಬಂಧನ
ತುನಿಷಾ ಮತ್ತು ಸಂಜೀವ್ ಕೌಶಲ್ (ಚಂಡೀಗಢದಲ್ಲಿ ಚಿಕ್ಕಪ್ಪ) ಭಯಾನಕ ಸಂಬಂಧವನ್ನು ಹೊಂದಿದ್ದರು. ಸಂಜೀವ್ ಕೌಶಲ್ ಮತ್ತು ಆಕೆಯ ತಾಯಿ ವನಿತಾ ತುನಿಷಾಳ ಹಣಕಾಸಿನ ಮೇಲೆ ಹಿಡಿತ ಸಾಧಿಸುತ್ತಿದ್ದರು. ತುನಿಷಾ ಆಗಾಗ್ಗೆ ತನ್ನ ಸ್ವಂತ ಹಣಕ್ಕಾಗಿ ತನ್ನ ತಾಯಿಯ ಮುಂದೆ ಬೇಡುತ್ತಿದ್ದಳು ಎಂದು ಶೀಜನ್ ಖಾನ್ ಪರ ವಕೀಲರು ಹೇಳಿದರು.
"ತುನಿಷಾ ಅವರ ಚಿಕ್ಕಪ್ಪ ಎಂದು ಕರೆಯಲ್ಪಡುವ ಪವನ್ ಶರ್ಮಾ ಅವರ ಮಾಜಿ ಮ್ಯಾನೇಜರ್ ಆಗಿದ್ದರು, ನಾಲ್ಕು ವರ್ಷಗಳ ಹಿಂದೆ ಅವರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರಿಂದ ಮತ್ತು ಅವಳೊಂದಿಗೆ ಕಠೋರವಾಗಿ ವರ್ತಿಸುತ್ತಿದ್ದರು ಎಂಬ ಕಾರಣದಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಮಿಶ್ರಾ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಡಿಸೆಂಬರ್ 24 ರಂದು ವಾಸೈನಿಂದ ಟಿವಿ ಧಾರವಾಹಿಯೊಂದರ ಸೆಟ್ ನಲ್ಲಿ ತುನಿಷಾಳ ಮೃತದೇಹವನ್ನು ವಶಕ್ಕೆ ಪಡೆದ ನಂತರ ಡಿಸೆಂಬರ್ 25 ರಂದು ಶ್ರೀಜಾನ್ ಖಾನ್ ನನ್ನು ಪೊಲೀಸರು ಬಂಧಿಸಿದರು.