2024 ಲೋಕಸಭಾ ಚುನಾವಣೆಗೆ ರಣತಂತ್ರ: ಇದೇ ತಿಂಗಳು 11 ರಾಜ್ಯಗಳಿಗೆ ಅಮಿತ್ ಶಾ ಭೇಟಿ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಣತಂತ್ರ ರೂಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ತಿಂಗಳು 11 ರಾಜ್ಯಗಳ ಭೇಟಿ ನೀಡಲಿದ್ದಾರೆ ಎಂದು ವರದಿಯೊಂದು ಹೇಳಿದೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಣತಂತ್ರ ರೂಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ತಿಂಗಳು 11 ರಾಜ್ಯಗಳ ಭೇಟಿ ನೀಡಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಜನವರಿ 5 ರಂದು ತ್ರಿಪುರಾ, 6ಕ್ಕೆ ಮಣಿಪುರ ಮತ್ತು ನಾಗಾಲ್ಯಾಂಡ್, ಜನವರಿ 7ಕ್ಕೆ ಛತ್ತೀಸ್ ಗಢ ಮತ್ತು ಜಾರ್ಖಂಡ್ ಮತ್ತು 8 ರಂದು ಆಂಧ್ರ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಜನವರಿ 16 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಅಮಿತ್ ಶಾ, ಜನವರಿ 17ಕ್ಕೆ ಪಶ್ಚಿಮ ಬಂಗಾಳ, ಜನವರಿ 28 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ನಂತರ ಹರಿಯಾಣ ಮತ್ತು ಪಂಜಾಬ್ ಗೆ ಭೇಟಿ ನೀಡುವ ಸಾಧ್ಯತೆಯಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಅಲ್ಪ ಅಂತರಗಳಲ್ಲಿ ಸೋತಿರುವ 160 ಕ್ಷೇತ್ರಗಳ ಕಿರುಪಟ್ಟಿಯನ್ನು ವಿಸ್ತಾರಕ್ ಗಳಿಗೆ ಕಳುಹಿಸಿದೆ.

ಈ ವಿಸ್ತಾರಕಗಳು 2024ರ ಲೋಕಸಭೆ ಚುನಾವಣೆಗೂ ಮುನ್ನಾ 9 ರಾಜ್ಯಗಳ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. 2019ರಲ್ಲಿ ದೇಶಾದ್ಯಂತ 140 ಕ್ಷೇತ್ರಗಳಲ್ಲಿ ಸೋತಿತ್ತು. ನಂತರ ಇದಕ್ಕೆ 20 ಕ್ಷೇತ್ರಗಳು ಸೇರಿದ್ದವು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com