ಕೊರೆಯುವ ಚಳಿ, ಹಿಮರಾಶಿಯಲ್ಲಿ ಎಲ್ ಒಸಿಯಲ್ಲಿ ದೇಶ ಕಾಯುವ ಸೈನಿಕರು: ಮೈ ಝುಮ್ಮೆನಿಸುವ ವಿಡಿಯೋ

ದೇಶಾದ್ಯಂತ ಚಳಿಯ ತೀವ್ರತೆ ಹೆಚ್ಚಾಗಿದ್ದು, ಹೊತ್ತು ನೆತ್ತಿ ಮೇಲೆ ಬಂದರೂ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಮೈ ಕೊರೆಯುವ ಮಹಾ ಚಳಿಯಿಂದ  ಜನರು ಬೆಚ್ಚಿ ಬಿದ್ದಿದ್ದು, ದೈನಂದಿನ ಚಟುವಟಿಕೆಗಳಲ್ಲೂ ಏರುಪೇರು ಆಗಿದೆ. 
ಬಿಎಸ್ ಎಫ್ ಯೋಧರು
ಬಿಎಸ್ ಎಫ್ ಯೋಧರು

ಜಮ್ಮು-ಕಾಶ್ಮೀರ: ದೇಶಾದ್ಯಂತ ಚಳಿಯ ತೀವ್ರತೆ ಹೆಚ್ಚಾಗಿದ್ದು, ಹೊತ್ತು ನೆತ್ತಿ ಮೇಲೆ ಬಂದರೂ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಮೈ ಕೊರೆಯುವ ಮಹಾ ಚಳಿಯಿಂದ  ಜನರು ಬೆಚ್ಚಿ ಬಿದ್ದಿದ್ದು, ದೈನಂದಿನ ಚಟುವಟಿಕೆಗಳಲ್ಲೂ ಏರುಪೇರು ಆಗಿದೆ. 

ಅದರಲ್ಲೂ ರಾಷ್ಟ್ರದ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದು, ತಾಪಮಾನ 5 ಡಿಗ್ರಿ ಸೆಲ್ಸಿಯಸ್ ನಿಂದ 6 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತಿದೆ. ಇಂತಹ ಕೊರೆಯುವ ಚಳಿ, ಹಿಮರಾಶಿಗಳ ನಡುವೆ ಗಡಿ ಭದ್ರತಾ ಪಡೆಯ ಯೋಧರು  ಎಲ್ ಒಸಿಯಲ್ಲಿ ದೇಶ ಕಾಯುತ್ತಿದ್ದಾರೆ. 

ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿ ಚಳಿ ಮತ್ತು ರಕ್ತ ಹೆಪ್ಪು ಗಟ್ಟಿಸುವ ಹಿಮಗಾಳಿಯಲ್ಲಿ ಉಸಿರಾಡುವುದೇ ದೊಡ್ಡ ಹೋರಾಟ ಎಂಬ ಸ್ಥಿತಿಯಲ್ಲಿಯೂ ಸೈನಿಕರು, ದಟ್ಟ ಹಿಮರಾಶಿಯಲ್ಲಿ ನಡೆಯುತ್ತಾ ದೇಶ ಸೇವೆ ಮಾಡುತ್ತಿದ್ದಾರೆ. ಈ ವಿಡಿಯೋ ನಿಜಕ್ಕೂ ಮೈ ಝುಮ್ಮೆನಿಸುವಂತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com