
ಕ್ಯಾಬಿನೆಟ್ ಸಚಿವ ಫೌಜಾ ಸಿಂಗ್ ಸರಾರಿ
ಚಂಡಿಗಢ: ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಕ್ಯಾಬಿನೆಟ್ ಸಚಿವ ಫೌಜಾ ಸಿಂಗ್ ಸರಾರಿ ಶನಿವಾರ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣ ನೀಡಿ ಅವರು ಸಿಂಗ್ ಸರಾರಿ ರಾಜೀನಾಮೆ ನೀಡಿರುವುದಾಗಿ ಮೂಲಗಳು ಹೇಳಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಹಾಗೆಯೇ ಇರುವುದಾಗಿ ಸರಾರಿ ಹೇಳಿರುವುದಾಗಿ ವರದಿಯಾಗಿದೆ.
ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಪಂಜಾಬ್ ಕ್ಯಾಬಿನೆಟ್ ಪುನರ್ ರಚನೆಯಾಗಲಿದ್ದು, ಹೊಸ ಮುಖಗಳು ಅವಕಾಶ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
AAP leader Fauja Singh Sarari tenders his resignation from the post of a minister in the Punjab cabinet: Sources
— ANI (@ANI) January 7, 2023
(Pic - his oath ceremony as a minister on 4th July 2022) pic.twitter.com/rJJwxC1BwB