ಸ್ಪೀಡಾಗಿ ಬಂದ ಟ್ರಕ್ ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಕ್ಷಣಾರ್ಧದಲ್ಲೇ ಪಾರಾದ ಬೈಕ್ ಸವಾರ! ವಿಡಿಯೋ
ವೇಗವಾಗಿ ಬಂದ ಟ್ರಕ್ ವೊಂದು ಇನ್ನೇನು ಡಿಕ್ಕಿ ಹೊಡೆಯಿತು ಅಂದುಕೊಳ್ಳುವಷ್ಟರಲ್ಲಿ ಕ್ಷಣಾರ್ಧದಲ್ಲೇ ಕೂದಲೆಳೆ ಅಂತರದಿಂದ ಬೈಕ್ ಸವಾರ ಪಾರಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
Published: 07th January 2023 12:55 PM | Last Updated: 07th January 2023 03:17 PM | A+A A-

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನವದೆಹಲಿ: ವೇಗವಾಗಿ ಬಂದ ಟ್ರಕ್ ವೊಂದು ಇನ್ನೇನು ಡಿಕ್ಕಿ ಹೊಡೆಯಿತು ಅಂದುಕೊಳ್ಳುವಷ್ಟರಲ್ಲಿ ಕ್ಷಣಾರ್ಧದಲ್ಲೇ ಕೂದಲೆಳೆ ಅಂತರದಿಂದ ಬೈಕ್ ಸವಾರ ಪಾರಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಐಪಿಎಸ್ ಅಧಿಕಾರಿ ದಿಪಂಶು ಕಬ್ರಾ ಈ ಟ್ವೀಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತಿ ಮಿತಿಯಾದ ಸ್ಪೀಡ್ ನಿರ್ವಹಿಸಿದರೆ ಅಪಘಾತಗಳು ಸಂಭವಿಸುವುದಿಲ್ಲ, ಇತರರು ಕೂಡಾ ಸುರಕ್ಷಿತವಾಗಿರುತ್ತಾರೇ, ನೀವು ಕೂಡಾ ಸುರಕ್ಷಿತರಾಗಿರುತ್ತೀರಾ ಎಂದು ಕಬ್ರಾ ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಸ್ಪೀಡಾಗಿ ಬಂದ ಬೈಕ್ ಸವಾರ ಕ್ರಾಸ್ ಮಾಡುವಾಗ, ಭಾರಿ ಗಾತ್ರದ ಟ್ರಕ್ ವೊಂದು ವೇಗವಾಗಿ ಬಂದಿದೆ. ಇನ್ನೇನು ಬೈಕ್ ಗೆ ಅಪ್ಪಳಿಸಿತು ಅನ್ನುವಷ್ಟರಲ್ಲಿ ಅದೃಷ್ಟವಶಾತ್ ಸವಾರ ಅಪಾಯದಿಂದ ಪಾರಾಗಿದ್ದಾನೆ.
ಕಬ್ರಾ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಟ್ವಿಟಿಗರ ಗಮನ ಸೆಳೆದಿದ್ದು, 90, 000 ಕ್ಕೂ ಹೆಚ್ಚು ವೀವ್ಹ್ ಹಾಗೂ 700ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.
ऐसी गति राखिये, दुर्घटना कभी ना होय,
— Dipanshu Kabra (@ipskabra) January 5, 2023
औरन भी सुरक्षित रहै, आपौ सुरक्षित होय. pic.twitter.com/Gvy6B96EdD