ವಿಮಾನದಲ್ಲಿ ಕುಡಿದು ಗದ್ದಲ, ಇಬ್ಬರು ಪ್ರಯಾಣಿಕರ ಬಂಧನ

ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಮುಂದುವರೆದಿದೆ. ಇಂಡಿಗೋ ವಿಮಾನ ಹಾರಾಟದ ಮಾರ್ಗ ಮಧ್ಯ ಮಧ್ಯದಲ್ಲಿ ಕುಡಿದು ಗದ್ದಲ ಉಂಟುಮಾಡಿದ ಆರೋಪದ ಮೇರೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ನೆರವಿನಿಂದ ಇಬ್ಬರು ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಇಂಡಿಗೋ ವಿಮಾನದ ಸಾಂದರ್ಭಿಕ ಚಿತ್ರ
ಇಂಡಿಗೋ ವಿಮಾನದ ಸಾಂದರ್ಭಿಕ ಚಿತ್ರ

ಪಾಟ್ನಾ: ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಮುಂದುವರೆದಿದೆ. ಇಂಡಿಗೋ ವಿಮಾನ ಹಾರಾಟದ ಮಾರ್ಗ ಮಧ್ಯ ಮಧ್ಯದಲ್ಲಿ ಕುಡಿದು ಗದ್ದಲ ಉಂಟುಮಾಡಿದ ಆರೋಪದ ಮೇರೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ನೆರವಿನಿಂದ ಇಬ್ಬರು ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಇಂಡಿಗೋ ಮ್ಯಾನೇಜರ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಅನುಚಿತ ವರ್ತನೆ ತೋರಿದ ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ವಿಮಾನ ನಿಲ್ದಾಣ ಠಾಣಾಧಿಕಾರಿ ತಿಳಿಸಿದ್ದಾರೆ. ರೋಹಿತ್ ಮತ್ತು ನಿತೀಶ್ ಬಂಧಿತ ಆರೋಪಿಗಳಾಗಿದ್ದಾರೆ. ದೆಹಲಿ-ಪಾಟ್ನಾ ಮಾರ್ಗದ ಇಂಡಿಗೋ ವಿಮಾನ 6ಇ-6383ದಲ್ಲಿ ಗಲಾಟೆ ಮಾಡಿದ ನಂತರ ಕಳೆದ ರಾತ್ರಿ ಅವರನ್ನು ಬಂಧಿಸಿ, ಪಾಟ್ನಾ ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಲಾಯಿತು.

ಈ ಇಬ್ಬರು ಪ್ರಯಾಣಿಕರ ಹತ್ತಿರ ಮದ್ಯವಿತ್ತು ಎಂದು ಇಂಡಿಗೋ ಎಟಿಸಿಗೆ ಮಾಹಿತಿ ನೀಡಿದೆ. ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರು ಮದ್ಯ ಇಟ್ಟುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಬಂಧಿತ ಪ್ರಾಧಿಕಾರದಲ್ಲಿ ಅಧಿಕೃತ ದೂರು ದಾಖಲಿಸಿದೆ. ಮದ್ಯ ಸೇವಿಸಿದ್ದಕ್ಕೆ ಪ್ರಯಾಣಿಕರನ್ನು ವಿಮಾನದ ಸಿಬ್ಬಂದಿ ತಡೆದಿದ್ದು, ಘಟನೆ ಸಂಬಂಧ ಅವರು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com