ವಿಶಾಖಪಟ್ಟಣಂ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಿದ ಮಕ್ಕಳು; 2 ಕಿಟಕಿ ಗಾಜುಗಳಿಗೆ ಹಾನಿ
ವಿಶಾಖಪಟ್ಟಣಂನ ರೈಲ್ವೆ ಯಾರ್ಡ್‌ನಲ್ಲಿ ಹೊಸ ವಂದೇ ಭಾರತ್ ರೈಲಿನ ಕೋಚ್‌ಗೆ ಆಟವಾಡುತ್ತಿದ್ದ ಮಕ್ಕಳು ಕಲ್ಲು ತೂರಿದ್ದು, ಗಾಜಿನ ಕಿಟಕಿ ಒಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 12th January 2023 12:46 PM | Last Updated: 12th January 2023 12:46 PM | A+A A-

ವಂದೇ ಭಾರತ್ ಎಕ್ಸ್ ಪ್ರೆಸ್
ವಿಶಾಖಪಟ್ಟಣಂ: ಇಲ್ಲಿನ ರೈಲ್ವೆ ಯಾರ್ಡ್‌ನಲ್ಲಿ ಹೊಸ ವಂದೇ ಭಾರತ್ ರೈಲಿನ ಕೋಚ್‌ಗೆ ಆಟವಾಡುತ್ತಿದ್ದ ಮಕ್ಕಳು ಕಲ್ಲು ತೂರಿದ್ದು, ಗಾಜಿನ ಕಿಟಕಿ ಒಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 15 ರಂದು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವಿನ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಕಂಚರಪಾಲೆಂನ ಕೋಚ್ ಕಾಂಪ್ಲೆಕ್ಸ್ ಬಳಿ ಆಟವಾಡುತ್ತಿದ್ದ ಕೆಲವು ಮಕ್ಕಳು ಬುಧವಾರ ರಾತ್ರಿ ರೈಲಿಗೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಹಾನಿ ಸಂಭವಿಸಿದೆ ಎಂದು ರೈಲ್ವೇ ರಕ್ಷಣಾ ಪಡೆ ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ತನಿಖೆಯಲ್ಲಿ ವಿಶಾಖಪಟ್ಟಣಂ ಪೊಲೀಸರು ಮತ್ತು ಆರ್‌ಪಿಎಫ್ ನಡೆಸಿದ ತನಿಖೆಯಲ್ಲಿ ಈ ವಿಚಾರ ತಿಳಿದುಬಂದಿದೆ. ನಿರ್ವಹಣೆ ತಪಾಸಣೆಗಾಗಿ ವಂದೇ ಭಾರತ್ ರೈಲಿನ ಕುಂಟೆ ಬುಧವಾರ ಚೆನ್ನೈನಿಂದ ವಿಶಾಖಪಟ್ಟಣಕ್ಕೆ ಆಗಮಿಸಿತ್ತು.
ಇದನ್ನೂ ಓದಿ: ಚಾಲನೆಗೂ ಮುನ್ನವೇ ಆಂಧ್ರದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ; ಗಾಜು ಪುಡಿಪುಡಿ, ವಿಡಿಯೋ!
ಒಂದು ಕಿಟಕಿಯ ಗಾಜು ಸಂಪೂರ್ಣವಾಗಿ ಒಡೆದು ಹೋಗಿದ್ದರೆ, ಮತ್ತೊಂದರಲ್ಲಿ ಸಣ್ಣ ಬಿರುಕು ಮೂಡಿದೆ. ಅಪರಾಧ ಎಸಗಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.