ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಶೀಜನ್ ಖಾನ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್
ಸಹ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ನಟ ಶೀಜನ್ ಖಾನ್ ಜಾಮೀನು ಅರ್ಜಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
Published: 13th January 2023 05:00 PM | Last Updated: 13th January 2023 05:00 PM | A+A A-

ತುನಿಶಾ ಶರ್ಮಾ - ಶೀಜನ್ ಖಾನ್
ಮುಂಬೈ: ಸಹ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ನಟ ಶೀಜನ್ ಖಾನ್ ಜಾಮೀನು ಅರ್ಜಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ 28 ವರ್ಷದ ಶೀಜನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಡಿ.ದೇಶಪಾಂಡೆ ಅವರು, ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.
ಇದನ್ನು ಓದಿ: ಶ್ರದ್ಧಾ ಹತ್ಯೆ ಪ್ರಕರಣ ನಟಿ ತುನಿಶಾ ಶರ್ಮಾ ಜೊತೆ ಬಲವಂತವಾಗಿ ಬೇರ್ಪಡಲು ಕಾರಣ: ಶೀಜನ್ ಖಾನ್
ವಕೀಲರಾದ ಶೈಲೇಂದ್ರ ಮಿಶ್ರಾ ಮತ್ತು ಶರದ್ ರೈ ಅವರು ಆರೋಪಿ ಶೀಜನ್ ಖಾನ್ ಪರವಾಗಿ ವಾದಿಸಿದರು.
ತುನಿಶಾ ಕುಟುಂಬವನ್ನು ಪ್ರತಿನಿಧಿಸಿದ್ದ ವಕೀಲ ತರುಣ್ ಶರ್ಮಾ ಅವರು ನಟನಿಗೆ ಜಾಮೀನು ನೀಡುವುದನ್ನು ವಿರೋಧ ವ್ಯಕ್ತಪಡಿಸಿದರು ಮತ್ತು ಈ ವಿಷಯದಲ್ಲಿ ಖಾನ್ ಅವರ ತಾಯಿ ಕೂಡ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.