ಶ್ರದ್ಧಾ ಹತ್ಯೆ ಪ್ರಕರಣ ನಟಿ ತುನಿಶಾ ಶರ್ಮಾ ಜೊತೆ ಬಲವಂತವಾಗಿ ಬೇರ್ಪಡಲು ಕಾರಣ: ಶೀಜನ್ ಖಾನ್

ದೇಶವನ್ನೇ ನಡುಗಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಕಾರಣ ತುನೀಶಾ ಶರ್ಮಾ ಜೊತೆ ಬಲವಂತವಾಗಿ ಬೇರ್ಪಡಬೇಕಾಯಿತು ಎಂದು ಆರೋಪಿ ಶೀಜನ್ ಖಾನ್ ತಿಳಿಸಿದ್ದಾರೆ.
ಶ್ರದ್ಧಾ ವಾಕರ್-ತುನಿಶಾ-ಶೀಜನ್ ಖಾನ್
ಶ್ರದ್ಧಾ ವಾಕರ್-ತುನಿಶಾ-ಶೀಜನ್ ಖಾನ್

ಮುಂಬೈ: ದೇಶವನ್ನೇ ನಡುಗಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಕಾರಣ ತುನೀಶಾ ಶರ್ಮಾ ಜೊತೆ ಬಲವಂತವಾಗಿ ಬೇರ್ಪಡಬೇಕಾಯಿತು ಎಂದು ಆರೋಪಿ ಶೀಜನ್ ಖಾನ್ ತಿಳಿಸಿದ್ದಾರೆ. 

ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಜನ್ ಖಾನ್ ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಹಲವು ಸಂಗತಿಗಳನ್ನು ಶೀಜನ್ ಬಿಚ್ಚಿಟ್ಟಿದ್ದಾನೆ. ಈ ಹಿಂದೆಯೂ ತುನೀಶಾ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ರಕ್ಷಿಸಿದ್ದೆ, ನಂತರ ಈ ವಿಷಯವನ್ನು ತುನೀಶಾ ತಾಯಿಗೂ ತಿಳಿಸಿದ್ದು ಆಕೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಹೇಳಿದ್ದಾಗಿ ಶೀಜನ್ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ಬ್ರೇಕಪ್ ಏಕೆ ಸಂಭವಿಸಿತು ಎಂಬುದರ ಕುರಿತು ಆರೋಪಿ ಶೀಜನ್ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ಆಘಾತಕಾರಿ ವಿಷಯವನ್ನು ತಿಳಿಸಿದ್ದಾನೆ. ಶ್ರದ್ಧಾ ಕೊಲೆ ಪ್ರಕರಣದ ನಂತರ ತಾನು ತುಂಬಾ ಟೆನ್ಷನ್‌ಗೆ ಒಳಗಾಗಿದ್ದೆ ಎಂದು ಶೀಜನ್ ಹೇಳಿಕೊಂಡಿದ್ದಾನೆ. ಶ್ರದ್ಧಾ ಹತ್ಯೆ ಪ್ರಕರಣದ ನಂತರ ದೇಶದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿಯಲ್ಲಿ, ರಸ್ತೆಯಲ್ಲಿ ಕೇಳಿಬರುತ್ತಿರುವ ಚರ್ಚೆಯ ಬಗ್ಗೆ ಆತಂಕ ವ್ಯಕ್ತವಾಗಿತ್ತು.

ತಾನು ಮುಸ್ಲಿಂ ತುನೀಶಾ ಹಿಂದೂ ಹುಡುಗಿ. ತುನಿಶಾ ತನಗಿಂತ ಚಿಕ್ಕವಳು ಎಂದು ಶೀಜನ್ ವಯಸ್ಸನ್ನೂ ಉಲ್ಲೇಖಿಸಿದ್ದಾನೆ. ಇನ್ನು ವಯಸ್ಸು ಮತ್ತು ಧರ್ಮವನ್ನು ಉಲ್ಲೇಖಿಸಿ ಶೀಜನ್ ಮದುವೆಯಾಗಲು ನಿರಾಕರಿಸಿದ್ದಾಗಿ ಹೇಳಿದ್ದಾನೆ.

ಶೀಜನ್ ತಮ್ಮ ಹೇಳಿಕೆಯಲ್ಲಿ ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾನೆ. ಆತ್ಮಹತ್ಯೆಗೂ ಮುನ್ನ ತುನೀಶಾ ಏನನ್ನೂ ತಿಂದಿರಲಿಲ್ಲ, ಕುಡಿದಿರಲಿಲ್ಲ. ತುನೀಶಾ ನೇಣು ಬಿಗಿದುಕೊಂಡ ದಿನ, ಶೀಜನ್ ಸೆಟ್‌ನಲ್ಲಿ ಆಕೆಗೆ ಆಹಾರ ನೀಡಲು ಪ್ರಯತ್ನಿಸುತ್ತಿದ್ದನು ಆದರೆ ತುನೀಶಾ ಏನನ್ನೂ ತಿನ್ನಲಿಲ್ಲ. ನಂತರ ನಾನು ನನ್ನ ಕೆಲಸದಲ್ಲಿ ನಿರತನಾದೆ.

ಎಷ್ಟೇ ಸಮಯ ಕಳೆದರೂ ತುನೀಶಾ ಸೆಟ್ ಗೆ ಬರಲಿಲ್ಲ. ಹೀಗಾಗಿ ನಾನು ಸ್ವತಃ ಹೋಗಿ ಮೇಕಪ್ ಕೋಣೆಯ ಬಾಗಿಲು ಬಡಿದೆ. ತುನೀಶಾಳಿಂದ ಉತ್ತರ ಬಾರದೆ ಇದ್ದಾಗ ಅಲ್ಲಿದ್ದವರ ಜೊತೆ ಸೇರಿ ಬಾಗಿಲು ಒಡೆದು ನೋಡಿದಾಗ ತುನೀಶಾ ನೇಣು ಬಿಗಿದುಕೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತುನೀಶಾ ಬದುಕುಳಿಯುತ್ತಾಳೆ ಎಂದು ಭಾವಿಸಿದ್ದನು. ಆದರೆ ಮಾರ್ಗಮಧ್ಯೆ ಆಕೆ ಮೃತಪಟ್ಟಳು. ನಂತರ ವೈದ್ಯರು ತುನಿಶಾ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com