ತಮಿಳುನಾಡು: ಜಲ್ಲಿಕಟ್ಟು ಸ್ಪರ್ಧೆ ವೇಳೆ ಅವಾಂತರ, ಹೋರಿ ತಿವಿದು 19 ಮಂದಿಗೆ ಗಾಯ

ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು 19 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಮಧುರೈನ ಅವನಿಯಪುರಂನಲ್ಲಿ ಭಾನುವಾರ ನಡೆದಿದೆ.
ಜಲ್ಲಿಕಟ್ಟು ಸ್ಪರ್ಧೆಯ ಚಿತ್ರ
ಜಲ್ಲಿಕಟ್ಟು ಸ್ಪರ್ಧೆಯ ಚಿತ್ರ

ಮಧುರೈ: ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು 19 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಮಧುರೈನ ಅವನಿಯಪುರಂನಲ್ಲಿ ಭಾನುವಾರ ನಡೆದಿದೆ.

ಹೋರಿ ತಿವಿತದಿಂದ ಗಾಯಗೊಂಡ 11 ಮಂದಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.ಈ ಘಟನೆ ಹೊರತಾಗಿಯೂ ಇಂದು ಸಂಜೆ 4 ಗಂಟೆಯವರೆಗೂ ಜಲ್ಲಿಕಟ್ಟು ಸ್ಪರ್ಧೆ ಮುಂದುವರೆಯಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ 

ಪೊಂಗಲ್ ಹಬ್ಬದ ಅಂಗವಾಗಿ ಮಧುರೈನ ಮೂರು ಗ್ರಾಮಗಳಲ್ಲಿ ಜಲ್ಲಿಕಟ್ಟು ಅದ್ದೂರಿಯಾಗಿ ಆರಂಭವಾಯಿತು. ಇದು ಸ್ಥಳೀಯ ಹೋರಿ ಪಳಗಿಸುವ ಕ್ರೀಡೆಯಾಗಿದ್ದು, ಇದರಲ್ಲಿ ಭಾಗವಹಿಸುವವರು ಅದರ ಕೊಂಬನ್ನು ಹಿಡಿದು ಪಳಗಿಸಲು ಪ್ರಯತ್ನಿಸುತ್ತಾರೆ.

ಸೋಮವಾರ ಮತ್ತು ಮಂಗಳವಾರ ಪಾಲಮೇಡು ಮತ್ತು ಅಲಂಗನಲ್ಲೂರಿನಲ್ಲಿ ಮತ್ತಷ್ಟು ಜಲ್ಲಿಕಟ್ಟು ಕಾರ್ಯಕ್ರಮಗಳು ನಡೆಯಲಿವೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ 300 ಗೂಳಿ ಪಳಗಿಸುವವರಿಗೆ ಮತ್ತು 150 ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com