ಭಯೋತ್ಪಾದಕರ ಬಂಧನದ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಳ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕರ ಬಂಧನವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. 
ರಾಮ ಮಂದಿರದ ಮಾದರಿ
ರಾಮ ಮಂದಿರದ ಮಾದರಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕರ ಬಂಧನವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಬಲಪಂಥೀಯ ಹಿಂದೂ ನಾಯಕರ ಹತ್ಯೆಗೆ ಈ ಬಂಧಿತ ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
 
ಅಯೋಧ್ಯೆಯ ಸಿ.ಒ ಶೈಲೇಂದ್ರ ಕುಮಾರ್ ಗೌತಮ್ ಈ ಬಗ್ಗೆ ಮಾಹಿತಿ ನೀಡಿದ್ದು, ನಗರದಾದ್ಯಂತ ಅಲರ್ಟ್ ಘೋಷಿಸಲಾಗಿದೆ, ರಾಮ ಮಂದಿರ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಅಯೋಧ್ಯೆಗೆ ಪ್ರವೇಶಿಸುವವರ ಗುರುತಿನ ಚೀಟಿ ನೋಡಿಯೇ ಅವರನ್ನು ಒಳಗೆ ಬಿಡುತ್ತಿದ್ದೇವೆ, ರಾಮ ಮಂದಿರ ನಿರ್ಮಾಣ ವ್ಯಾಪ್ತಿಗೆ ಬರುವ ಮಠ, ಮಂದಿರಗಳಲ್ಲಿ ವ್ಯಾಪಕ ತಪಾಸಣೆ ಮಾಡಲಾಗುತ್ತಿದೆ ಎಂದು ಗೌತಮ್ ತಿಳಿಸಿದ್ದಾರೆ. 

ಇನ್ನು ಅಯೋಧ್ಯೆಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿದ್ದು, ಈ ಕ್ಷೇತ್ರದಲ್ಲಿ ಭಗವಾನ್ ಹನುಮಂತ ರಕ್ಷಕನಾಗಿದ್ದಾನೆ. ಆತ ಇಡೀ ಜಗತ್ತಿನ ರಕ್ಷಕ ಹಾಗೊಂದು ವೇಳೆ ಯಾರಾದರೂ ರಾಮ ಮಂದಿರದ ಮೇಲೆ ದಾಳಿ ನಡೆಸಲು ಯತ್ನಿಸಿದವರು ಉಳಿಯುವುದಿಲ್ಲ. ಅವರಿಗೆ ಇಲ್ಲಿ ಹನುಮಂತ ರಕ್ಷಕನಾಗಿರುವುದು ತಿಳಿದಿಲ್ಲ ಎನಿಸುತ್ತದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com