ಬಿಹಾರದ ಸರನ್ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡ ಗಂಗಾ ವಿಲಾಸ್ ಕ್ರೂಸ್: ಸುದ್ದಿ ನಿರಾಕರಿಸಿದ ಸರ್ಕಾರ

ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಗಂಗಾ ವಿಲಾಸ್ ಕ್ರೂಸ್ ಬಿಹಾರದ ಸರನ್ ಜಿಲ್ಲೆಯ ಗಂಗಾ ನದಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಗಂಗಾ ವಿಲಾಸ್ ಕ್ರೂಸ್ ತನ್ನ 51 ದಿನಗಳ ಪ್ರಯಾಣವನ್ನು ಶನಿವಾರ ಆರಂಭಿಸಿತ್ತು. ಮೂರನೇ ದಿನವಾದ ನಿನ್ನೆ ಸೋಮವಾರ ಸಿಕ್ಕಿಹಾಕಿಕೊಂಡಿದ್ದು ನದಿಯಲ್ಲಿ ಆಳವಾಗಿ ನೀರಿಲ್ಲದ ಕಾರಣ ದಡದಲ್ಲಿ ಕಟ್ಟಿಹಾಕಲು ಸಾಧ್ಯವಾಗಲಿಲ್ಲ
ಗಂಗಾ ವಿಲಾಸ್ ಕ್ರೂಸ್  62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲ  ಹೊಂದಿದ್ದು ಮೂರು ಡೆಕ್‌ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್‌ಗಳು ಮತ್ತು ಐಷಾರಾಮಿ ಅನುಭವವನ್ನು ಒದಗಿಸುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ
ಗಂಗಾ ವಿಲಾಸ್ ಕ್ರೂಸ್ 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲ ಹೊಂದಿದ್ದು ಮೂರು ಡೆಕ್‌ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್‌ಗಳು ಮತ್ತು ಐಷಾರಾಮಿ ಅನುಭವವನ್ನು ಒದಗಿಸುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ

ಪಾಟ್ನಾ: ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಗಂಗಾ ವಿಲಾಸ್ ಕ್ರೂಸ್ ಬಿಹಾರದ ಸರನ್ ಜಿಲ್ಲೆಯ ಗಂಗಾ ನದಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಗಂಗಾ ವಿಲಾಸ್ ಕ್ರೂಸ್ ತನ್ನ 51 ದಿನಗಳ ಪ್ರಯಾಣವನ್ನು ಶನಿವಾರ ಆರಂಭಿಸಿತ್ತು. ಮೂರನೇ ದಿನವಾದ ನಿನ್ನೆ ಸೋಮವಾರ ಸಿಕ್ಕಿಹಾಕಿಕೊಂಡಿದ್ದು ನದಿಯಲ್ಲಿ ಆಳವಾಗಿ ನೀರಿಲ್ಲದ ಕಾರಣ ದಡದಲ್ಲಿ ಕಟ್ಟಿಹಾಕಲು ಸಾಧ್ಯವಾಗಲಿಲ್ಲ.

ಕ್ರೂಸ್ ನಲ್ಲಿದ್ದ ಪ್ರವಾಸಿಗರನ್ನು ಅವರು ತಲುಪಬೇಕಾದ ಚಿರಾಂಡ್ ಸ್ಥಳಕ್ಕೆ ಸಣ್ಣ ದೋಣಿಯ ಮೂಲಕ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಕಳುಹಿಸಿಕೊಟ್ಟಿತು. ಚಿರಾಂಡ್ ಗಂಗಾ ನದಿಯ ಉತ್ತರ ದಡದಲ್ಲಿ ಇರುವ ಪುರಾತತ್ತ್ವ ಶಾಸ್ತ್ರದ ಸ್ಥಳವಾಗಿದೆ.

ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಕ್ರೂಸ್ ಸರನ್ ಜಿಲ್ಲೆಯ ದೋರಿಗಂಜ್ ಚಿರಂದ್ ಘಾಟ್ ಬಳಿ ನಿಲುಗಡೆ ಮಾಡಲು ನಿರ್ಧರಿಸಲಾಗಿತ್ತು. ನದಿಯಲ್ಲಿ ಹೂಳು ಮತ್ತು ಕಡಿಮೆ ನೀರು ಇರುವುದರಿಂದ ಕ್ರೂಸ್ ಅನ್ನು ದಡಕ್ಕೆ ಕಟ್ಟಲು ಸಾಧ್ಯವಾಗಲಿಲ್ಲ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಛಾಪ್ರಾ ವೃತ್ತದ ಅಧಿಕಾರಿ ಸತ್ಯೇಂದ್ರ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಚಿರಂದ್‌ನಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. “ಕಡಿಮೆ ನೀರಿನ ಕಾರಣ, ನದಿಯ ದಡಕ್ಕೆ ವಿಹಾರವನ್ನು ತರುವಲ್ಲಿ ಸಮಸ್ಯೆ ಉಂಟಾಗಿದೆ. ಹಾಗಾಗಿ ಸಣ್ಣ ದೋಣಿಗಳು ಮತ್ತು ಮೋಟಾರು ದೋಣಿಗಳ ಮೂಲಕ ಪ್ರವಾಸಿಗರನ್ನು ಸ್ಥಳಕ್ಕೆ ಕರೆತರಲಾಯಿತು ಎಂದು ತಿಳಿಸಿದರು. 

“ಗಂಗಾ ವಿಲ್ಲಾ ಕ್ರೂಸ್ ವೇಳಾಪಟ್ಟಿಯ ಪ್ರಕಾರ ಪಾಟ್ನಾವನ್ನು ತಲುಪಿದವು. ಛಾಪ್ರಾದಲ್ಲಿ ಹಡಗು ಸಿಲುಕಿಕೊಂಡಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿಗದಿತ ವೇಳಾಪಟ್ಟಿಯಂತೆ ಹಡಗು ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸಲಿದೆ ಎಂದು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರದ (ಐಡಬ್ಲ್ಯುಎಐ) ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ ಟ್ವೀಟ್ ಮಾಡಿದ್ದಾರೆ.

ಪ್ರವಾಸಿಗರನ್ನು ಸಣ್ಣ ದೋಣಿಗಳಲ್ಲಿ ಗಂಗಾನದಿಯ ಉತ್ತರ ದಂಡೆಯಲ್ಲಿರುವ ಪುರಾತತ್ವ ತಾಣ ಚಿರಾಂಡ್‌ಗೆ ಕರೆದೊಯ್ಯಲಾಯಿತು. ಆದರೆ ಕ್ರೂಸ್ ನಲ್ಲಿ ಪ್ರಯಾಣ ಮಾಡಿದ ಪ್ರವಾಸಿಗರು ಇದೊಂದು ಅದ್ಭುತ ಅನುಭವ ಎಂದು ಹೇಳಿದ್ದಾರೆ. "ಭಾರತವು ಅದ್ಭುತವಾಗಿದೆ" ಎಂದು ಒಬ್ಬರು ಹೇಳಿದರೆ, ಮತ್ತೊಬ್ಬ ಪ್ರವಾಸಿಗರು "ಇದೊಂದು ಅದ್ಭುತ ಅನುಭವ." ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com