ನೇಪಾಳ ವಿಮಾನ ದುರಂತ: ಮತ್ತೆ ಇಬ್ಬರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 70ಕ್ಕೆ ಏರಿಕೆ

ನೇಪಾಳದ ಪೋಖರಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಯೇತಿ ಏರ್‌ಲೈನ್ಸ್ ವಿಮಾನ ದುರಂತ ಸ್ಥಳದಲ್ಲಿ ಸೋಮಾವರ ಮತ್ತೆ ಇಬ್ಬರ ಶವ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಪೊಲೀಸರು...
ವಿಮಾನ ಪತನಗೊಂಡಿರುವ ಸ್ಥಳ.
ವಿಮಾನ ಪತನಗೊಂಡಿರುವ ಸ್ಥಳ.

ಕಠ್ಮಂಡು: ನೇಪಾಳದ ಪೋಖರಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಯೇತಿ ಏರ್‌ಲೈನ್ಸ್ ವಿಮಾನ ದುರಂತ ಸ್ಥಳದಲ್ಲಿ ಸೋಮಾವರ ಮತ್ತೆ ಇಬ್ಬರ ಶವ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ಮತ್ತೊಬ್ಬ ಪ್ರಯಾಣಿಕನ ಶವ ಇಂದು ಸಂಜೆ ತಡವಾಗಿ ಪತ್ತೆಯಾಗಿದೆ. ಇನ್ನೂ ಇಬ್ಬರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.

ಸ್ಥಳದಿಂದ ಇದುವರೆಗೆ ಒಟ್ಟು 70 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

ಐವರು ಭಾರತೀಯರು ಸೇರಿದಂತೆ 72 ಜನರಿದ್ದ ಯೇತಿ ಏರ್‌ಲೈನ್ಸ್ ಪ್ರಯಾಣಿಕ ವಿಮಾನವು ಭಾನುವಾರ ಕೇಂದ್ರ ನೇಪಾಳದ ರೆಸಾರ್ಟ್ ನಗರವಾದ ಪೊಖರಾದಲ್ಲಿ ಹೊಸದಾಗಿ ಉದ್ಘಾಟನೆಯಾದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ನದಿಯ ಕಮರಿಯಲ್ಲಿ ಪತನಗೊಂಡಿತ್ತು.

ಭಾರತದ ಅಭಿಷೇಕ್‌ ಖುಶ್ವಾಹ, ಬಿಶಾಲ್‌ ಶರ್ಮಾ, ಅನಿಲ್‌ ಕುಮಾರ್‌ ರಾಜ್‌ಬರ್‌, ಸೋನು ಜೈಸ್ವಾಲ್‌ ಮತ್ತು ಸಂಜಯಾ ಜೈಸ್ವಾಲ್‌ ಅವರು ನೇಪಾಳದಲ್ಲಿ ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com