ನೇಪಾಳ ವಿಮಾನ ದುರಂತ
ನೇಪಾಳ ವಿಮಾನ ದುರಂತ

ನೇಪಾಳ ಇತಿಹಾಸದಲ್ಲೇ 3ನೇ ಭೀಕರ ವಿಮಾನ ಅಪಘಾತ: ಆಗಸದಲ್ಲೇ ಎಂಜಿನ್ ಗೆ ಹೊತ್ತಿತ್ತು ಬೆಂಕಿ.. ಅಪಘಾತಕ್ಕೆ ಇದೇನಾ ಕಾರಣ?

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್–72 ವಿಮಾನ ಪತನವಾಗಿದ್ದು, 5 ಮಂದಿ ಭಾರತೀಯರು, ಪೈಲಟ್ ಗಳು, ಸಹಾಯಕ ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 72 ಮಂದಿ ಸಾವಿಗೀಡಾಗಿದ್ದಾರೆ. 

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್–72 ವಿಮಾನ ಪತನವಾಗಿದ್ದು, 5 ಮಂದಿ ಭಾರತೀಯರು, ಪೈಲಟ್ ಗಳು, ಸಹಾಯಕ ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 72 ಮಂದಿ ಸಾವಿಗೀಡಾಗಿದ್ದಾರೆ. 

ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಭಾನುವಾರ ಬೆಳಿಗ್ಗೆ 10.25ಕ್ಕೆ ಹೊರಟಿತ್ತು. ಕಠ್ಮಂಡುವಿನಿಂದ 160 ಕಿ.ಮೀ. ದೂರದಲ್ಲಿರುವ ಪ್ರವಾಸಿ ನಗರ ಪೊಖರಾದಲ್ಲಿ ಬೆಳಿಗ್ಗೆ 10.40ರ ವೇಳೆಗೆ ಈ ವಿಮಾನ ಇಳಿಯಬೇಕಿತ್ತು. ಆದರೆ, ವಿಮಾನ ನಿಲ್ದಾಣದಿಂದ ಕೆಲವೇ ನೂರು ಮೀಟರ್‌ ದೂರದಲ್ಲಿದ್ದಾಗ ವಿಮಾನವು ನೆಲಕ್ಕೆ ಅಪ್ಪಳಿಸಿದೆ.

‘ಫೊಖರಾದ ನೂತನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಆರ್‌–72 ವಿಮಾನ ಇಳಿಯಬೇಕಿತ್ತು. ರನ್‌ವೇ ತಲುಪಲು ಕೇವಲ 12ರಿಂದ 15 ಸೆಕೆಂಡ್‌ಗಳಿರುವಾಗ ವಿಮಾನ ಪತನವಾಗಿದೆ. ನೂತನ ವಿಮಾನ ನಿಲ್ದಾಣ ಮತ್ತು ಹಳೆಯ ವಿಮಾನ ನಿಲ್ದಾಣದ ಮಧ್ಯೆ ಹರಿಯುವ ಸೇಟಿ ನದಿಯ ದಂಡೆಗೆ ವಿಮಾನ ಅಪ್ಪಳಿಸಿದೆ.

ವಿಶ್ವದ ಅತ್ಯಂತ ದುರ್ಗಮ ವಿಮಾನ ಮಾರ್ಗ
ಜಗತ್ತಿನ ಅತ್ಯಂತ ದುರ್ಗಮ ಅಥವಾ ಅಪಾಯಕಾರಿ ವಿಮಾನಯಾನ ಮಾರ್ಗವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ನೇಪಾಳ ಪ್ರಮುಖವಾಗಿದೆ. 1946ರಿಂದ ಈವರೆಗೆ ಇಲ್ಲಿ ಒಟ್ಟು 42 ವಿಮಾನಗಳು ಪತನವಾಗಿವೆ. 1992ರಲ್ಲಿ ಪಾಕಿಸ್ತಾನ ಏರ್‌ಲೈನ್ಸ್‌ನ ವಿಮಾನವು ಕಠ್ಮಂಡುವಿನಲ್ಲಿ ಪತನವಾಗಿ 167 ಮಂದಿ ಮೃತಪಟ್ಟಿದ್ದರು. ಇದೇ ನೇಪಾಳದಲ್ಲಿ ಮೇ 2022 ರಲ್ಲಿ ತಾರಾ ಏರ್ ವಿಮಾನವು ಉತ್ತರ ನೇಪಾಳದಲ್ಲಿ ಪತನಗೊಂಡು 22 ಜನರ ಸಾವಾಗಿತ್ತು. ನಾಲ್ಕು ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಪ್ರಯಾಣಿಸುತ್ತಿದ್ದ ವಿಮಾನ ಕಠ್ಮಂಡುವಿನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು 51 ಮಂದಿ ಸಾವನ್ನಪ್ಪಿದ್ದರು.

ವರ್ಷಕ್ಕೊಂದು ಅಪಘಾತ
ಮೂಲಗಳ ಪ್ರಕಾರ, ನೇಪಾಳ ದೇಶ ಪ್ರತಿ ವರ್ಷ ಸರಾಸರಿ ಒಂದು ವಿಮಾನ ದುರಂತವನ್ನು ಹೊಂದಿದೆ.. ಕಳೆದ 30 ವರ್ಷಗಳ ಅವಧಿಯಲ್ಲಿ ನೇಪಾಳದಲ್ಲಿ 27 ವಿಮಾನ ಅಪಘಾತಗಳು ಸಂಭವಿಸಿದ್ದು, 2010 ರಿಂದ, ಈ ಪ್ರದೇಶವು ಭಾನುವಾರದ ಅಪಘಾತವೂ ಸೇರಿದಂತೆ 11 ಭೀಕರ ವಿಮಾನ ಅಪಘಾತಗಳಿಗೆ ಸಾಕ್ಷಿಯಾಗಿದೆ.

ನೇಪಾಳದ 3ನೇ ಅತ್ಯಂತ ದೊಡ್ಡ ವಿಮಾನ ಅಪಘಾತ
ಭಾನುವಾರದ ವಿಮಾನ ಪತನ ನೇಪಾಳದ ಅತ್ಯಂತ ದೊಡ್ಡ ವಿಮಾನ ಅಪಘಾತ ಎನ್ನಲಾಗಿದೆ. ಏವಿಯೇಷನ್ ಸೇಫ್ಟಿ ನೆಟ್‌ವರ್ಕ್‌ನ ಮಾಹಿತಿಯ ಪ್ರಕಾರ, ಇದು ದೇಶದ ಮೂರನೇ ಅತ್ಯಂತ ಕೆಟ್ಟ ವಿಮಾನ ಅಪಘಾತವಾಗಿದೆ. ಭಾನುವಾರ ಪತನವಾದ ವಿಮಾನ ಕಂಪನಿ ಯೇತಿ ಏರ್‌ಲೈನ್ಸ್‌, ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ತುರ್ತು ಸಂದರ್ಭದ ಕಾರ್ಯಾಚರಣೆಗಳನ್ನು ಮಾತ್ರ ನಡೆಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ವಿಮಾನ ಅಪಘಾತಕ್ಕೆ ನೇಪಾಳದ ಬೌಗೋಳಿಕ ರಚನೆಯೇ ಮುಖ್ಯ ಕಾರಣ
ಇನ್ನು ಇಲ್ಲಿ ನಡೆಯುವ ಬಹುತೇಕ ವಿಮಾನ ಅಪಘಾತಗಳಿಗೆ ಈ ದೇಶದ ಬೌಗೋಳಿಕ ರಚನೆಯೇ ಕಾರಣ ಎನ್ನಲಾಗಿದೆ. ನೇಪಾಳ ಪರ್ವತಗಳ ದೇಶವಾಗಿದ್ದು, ನೇಪಾಳ ವಿಶ್ವದ ಅತ್ಯಂತ ದುರ್ಗಮ ವಿಮಾನ ಮಾರ್ಗ ಹೊಂದಿರುವ ದೇಶಗಳಲ್ಲಿ ಪ್ರಮುಖವಾಗಿದೆ. ಎವರೆಸ್ಟ್ ಸೇರಿದಂತೆ ವಿಶ್ವದ 14 ಅತ್ಯಂತ ಎತ್ತರದ ಶಿಖರಗಳಲ್ಲಿ ಎಂಟು ನೇಪಾಳದಲ್ಲೇ ಇವೆ. ಅದರ ಸುಂದರವಾದ ಒರಟಾದ ಭೂದೃಶ್ಯಗಳು ಚಾರಣಿಗರಿಗೆ ಜನಪ್ರಿಯ ಪ್ರವಾಸಿ ತಾಣವಾಗಿದೆಯಾದರೂ ವಿಮಾನ ನಡೆಸುವ ಪೈಲಟ್ ಗಳಿಗೆ ಮಾತ್ರ ನೇಪಾಳ ವಿಮಾನಯಾನ ಸಾಹಸದ ಕೆಲಸವೇ ಸರಿ.. ಇಲ್ಲಿ ಪ್ರತಿನಿತ್ಯ ಪೈಲಟ್ ಗಳು ಜೀವ ಕೈಯಲ್ಲಿ ಹಿಡಿದೇ ಕೆಲಸ ಮಾಡಬೇಕಾಗುತ್ತದೆ. 

ವಾಣಿಜ್ಯ ಪೈಲಟ್ ಮತ್ತು ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್‌ನ ಸಂಸ್ಥಾಪಕ ಕ್ಯಾಪ್ಟನ್ ಅಮಿತ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ನೇಪಾಳದಲ್ಲಿ ವಿಮಾನ ಹಾರಾಟ ಸಾಹಸದ ಕೆಲಸವೇ ಸರಿ.. ಅದರಲ್ಲೂ ರಾಜಧಾನಿ ಕಠ್ಮಂಡು ಅಪಾಯಕಾರಿ ವಾಯುಯಾನ ಮಾರ್ಗವನ್ನು ಹೊಂದಿದೆ. ಕಠ್ಮಂಡು ಒಂದು ಕಣಿವೆ, ಅದು ಬೌಲ್ ಮಾದರಿಯ ವಿಮಾನ ನಿಲ್ದಾಣ ಹೊಂದಿದೆ. ಇಲ್ಲಿ ನಿಲ್ದಾಣದ ಸುತ್ತಲೂ ಬೃಹತ್ ಪರ್ವತಗಳಿದ್ದು, ಅವುಗಳನ್ನು ದಾಟಿಕೊಂಡು ಹೋಗಿ ನಿಲ್ದಾಣದಲ್ಲಿ ವಿಮಾನ ಇಳಿಸಬೇಕು.. ಹಾಗಾಗಿ ಇದು ತುಂಬಾ ಸವಾಲಿನ ವಿಮಾನ ನಿಲ್ದಾಣವಾಗಿದೆ ಎಂದು ಹೇಳಿದ್ದಾರೆ.

ರಾಕ್ಷಸೀ ಹವಾಮಾನ
ನೇಪಾಳದ ಪರ್ವತ ಪ್ರದೇಶ ಎಂದರೆ ವಿಮಾನಗಳು ಟೇಕಾಫ್ ಮತ್ತು ಎತ್ತರದಲ್ಲಿ ಇಳಿಯಬೇಕು. ಕಡಿಮೆ ಗಾಳಿಯ ಸಾಂದ್ರತೆಯು ವಿಮಾನದ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿಮಾನದ ವೇಗವನ್ನು ನಿಧಾನಗೊಳಿಸಲು ಹೆಚ್ಚು ಕಷ್ಟಕರವಾಗುತ್ತದೆ. ಇದಲ್ಲದೆ, ನೇಪಾಳದ ಹವಾಮಾನದಲ್ಲಿ ಹಠಾತ್ ಬದಲಾವಣೆಗಳಾಗುವುದರಿಂದ ಪೈಲಟ್ ಗಳಿಗೆ ಗೋಚರತೆಯ ಸಮಸ್ಯೆ ಎದುರಾಗುತ್ತದೆ. 

ಪೈಲಟ್ ಗಳಿಗೆ ತಲೆನೋವಾಗಿರುವ ಹಳೆಯ ವಿಮಾನಗಳು
ಇನ್ನು ನೇಪಾಳ ಬಡ ದೇಶ.. ಇಲ್ಲಿ ಹೊಸ ಅತ್ಯಾಧುನಿಕ ವಿಮಾನಗಳನ್ನು ಖರೀದಿಗೆ ಹಿಂದೇಟು ಹೆಚ್ಚು.. ಪೈಲಟ್‌ಗಳು ಈ ಪ್ರದೇಶದಲ್ಲಿ ಬಳಸಿದ ಸಣ್ಣ ವಿಮಾನಗಳು ಅನಿರೀಕ್ಷಿತ ಪರಿಸ್ಥಿತಿಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಹೊಂದಿಲ್ಲ.. ಹೀಗಾಗಿ ಇಲ್ಲಿ ಹಾರಾಟ ಇನ್ನೂ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com