
ಅಪರೂಪದ ಕಿತ್ತಳೆ ಬಣ್ಣದ ಬಾವಲಿ
ಜಗ್ದಲ್ಪುರ: ಚತ್ತೀಸ್ ಗಢದ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆಯಾಗಿದೆ.
ಪೇಂಟೆಡ್ ಬ್ಯಾಟ್ ಎಂದೇ ಕರೆಸಿಕೊಳ್ಳುವ ಈ ಅಪರೂಪದ ಪ್ರಾಣಿ, ಕಿತ್ತಳೆ ಬಣ್ಣದಲ್ಲಿರುತ್ತದೆ ಹಾಗೂ ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಪರಲಿ ಬೋಡಾಲ್ ಗ್ರಾಮದಲ್ಲಿ ಬಾವಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಧಮ್ಶಿಲ್ ಗನ್ವೀರ್ ಹೇಳಿದ್ದಾರೆ.
ಬಸ್ತಾರ್ ಜಿಲ್ಲೆಯಲ್ಲಿನ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರನೇ ಬಾರಿಗೆ ಪತ್ತೆಯಾಗಿದೆ. ಇದಕ್ಕೂ ಮುನ್ನ 2020 ಹಾಗೂ 2022 ರಲ್ಲಿ ಪತ್ತೆಯಾಗಿತ್ತು. ಈ ರಾಷ್ಟ್ರೀಯ ಉದ್ಯಾನವನ ಲೈಮ್ ಸ್ಟೋನ್ ಗುಹೆಗಳಿಗೆ ಪ್ರಖ್ಯಾತಿ ಹೊಂದಿದ್ದು, ಬಾವಲಿಗಳಿಗೆ ಅತ್ಯುತ್ತಮ ಪ್ರದೇಶವಾಗಿದೆ ಎನ್ನುತ್ತಾರೆ ತಜ್ಞರು.
Name: Straw-colored fruit bat
— Give Bats A Break (@GiveBatsABreak) May 20, 2020
Found: Africa, Madagascar
Habitat: Tropical forests; arid regions
Diet: Frugivorous - dates, boabab flowers, mangoes, paw-paws, &c.
Superpower: Mastication Master - these chew wood for water & fruit only to drink the juice, then spit out the pulp pic.twitter.com/6VZXWW9kRX
ಈ ಅಪರೂಪದ ಬಾವಲಿಗೆ ಕೆರಿವೌಲಾ ಪಿಕ್ಟಾ ಎಂಬ ವೈಜ್ಞಾನಿಕ ಹೆಸರೂ ಇದ್ದು, ಅತ್ಯಂತ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವಿಗಳಾಗಿವೆ.ಈ ಬಾವಲಿಗಳು ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಥಾಯ್ಲ್ಯಾಂಡ್, ವಿಯೆಟ್ನಾಮ್ ಸಾಮಾನ್ಯವಾಗಿ ಕಂಡುಬರಲಿವೆ ಎಂದು ಧಮ್ಶಿಲ್ ಗನ್ವೀರ್ ಮಾಹಿತಿ ನೀಡಿದ್ದಾರೆ.
ಈ ಬಾವಲಿಗಳು ಹಾರುತ್ತಿರುವಾಗಲೇ ಕೀಟಗಳನ್ನು ಹಿಡಿದು ತಮ್ಮ ಆಹಾರವಾಗಿಸಿಕೊಳ್ಳುತ್ತವೆ ಹಾಗೂ ಜೋಳದ ಕೊಯ್ಲಿನ ವೇಳೆ ಕಂಡುಬರುತ್ತದೆ ಎನ್ನುತ್ತಾರೆ ಗನ್ವೀರ್.
ರಾಷ್ಟ್ರೀಯ ಉದ್ಯಾನವನದಲ್ಲಿ ಬಾವಲಿಗಳ ಪ್ರಭೇದಗಳ ಬಗ್ಗೆ ಮಾಹಿತಿ ಪಡೆಯಲು ರಾಷ್ಟ್ರೀಯ ಉದ್ಯಾನವನದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಗನ್ವೀರ್ ತಿಳಿಸಿದ್ದಾರೆ.
Bastar, Chhattisgarh | An Orange Bat was spotted in the Kanger Ghati National Park area. Indian wolf was also spotted in the area, which is an endangered species.
— ANI MP/CG/Rajasthan (@ANI_MP_CG_RJ) January 18, 2023
(Pics: Kanger Ghati National Park) pic.twitter.com/oAl073sl07
ಈ ರಾಷ್ಟೀಯ ಉದ್ಯಾನವನ 200 ಸ್ಕ್ವೇರ್ ಕಿ.ಮೀ ವ್ಯಾಪ್ತಿಯಲ್ಲಿದ್ದು, ಅಪರೂಪದ ಜೀವಿಗಳಿವೆ. ಭಾರತದಲ್ಲಿ ಬಾವಲಿಗಳು ಪಶ್ಚಿಮ ಘಟ್ಟಗಳಲ್ಲಿ, ಕೇರಳ, ಮಹಾರಾಷ್ಟ್ರ, ಒಡಿಶಾ, ಕಾಂಗರ್ ಕಣಿವೆಯಲ್ಲಿ ಹೆಚ್ಚು ಕಾಣಸಿಗುತ್ತವೆ.
ಬಾವಲಿಗಳು ಒಣ ಪ್ರದೇಶದಲ್ಲಿ ಹಾಗೂ ದಟ್ಟವಾದ ತೇವಾಂಶವುಳ್ಳ ಕಾಡುಗಳಲ್ಲಿ ಜೀವಿಸಲು ಬಯಸುತ್ತವೆ. ನಿದ್ರಿಸುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಅವು ಬಾಳೆ ಎಲೆಗಳ ನೆರಳನ್ನು ಆಶ್ರಯಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2020 ರ ನವೆಂಬರ್ ನಲ್ಲಿ ಇದೇ ರೀತಿಯ ಪೇಂಟೆಡ್ ಬ್ಯಾಟ್ ಗಾಯಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು, ಅದನ್ನು ರಕ್ಷಿಸಿ ನಂತರ ಮತ್ತೆ ಅದರ ಆವಾಸಸ್ಥಾನಕ್ಕೆ ಕಳಿಸಲಾಯಿತು ಎಂದು ತಜ್ಞರು ಹೇಳಿದ್ದಾರೆ.
ಚತ್ತೀಸ್ ಗಢ ಒಂದರಲ್ಲೇ 26 ಬಾವಲಿಗಳ ಪ್ರಭೇದಗಳಿವೆ ಎಂದು ಹೇಳಿರುವ ತಜ್ಞರು, ಈ ಬಗ್ಗೆ ಶೀಘ್ರವೇ ಸಂಶೋಧನಾ ಪತ್ರ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗಾಢ ಕಿತ್ತಳೆ ಬಣ್ಣ ಹಾಗೂ ಕಪ್ಪು ಬಣ್ಣದ ರೆಕ್ಕೆಗಳು, ಹಿಂಭಾಗದಲ್ಲಿ ದಟ್ಟವಾದ ಕಿತ್ತಳೆ ಬಣ್ಣದ ಕೂದಲು ಪೇಂಟೆಡ್ ಬಾವಲಿಗಳ ಲಕ್ಷಣಗಳಾಗಿವೆ. ಭಾರತದಲ್ಲಿ 131 ಪ್ರಭೇದದ ಬಾವಲಿಗಳಿದ್ದು ಈ ಪೈಕಿ 31 ದೇಶದ ಕೇಂದ್ರ ಭಾಗಗಳಲ್ಲಿ ಪತ್ತೆಯಾಗಿದೆ.