ಲಾರಿ ಚಾಲಕರ ಕೆಲಸದ ಅವಧಿ ನಿಗದಿಗೆ ಶೀಘ್ರವೇ ಕಾನೂನು: ಗಡ್ಕರಿ

ಲಾರಿ ಚಾಲಕರ ಕೆಲಸದ ಅವಧಿ ನಿರ್ಧರಿಸಲು ಶೀಘ್ರದಲ್ಲೇ ಕಾನೂನು ಜಾರಿಗೆ ತರಲಾಗುವುದು ಮತ್ತು 2025 ರ ಅಂತ್ಯದೊಳಗೆ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ...
ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ: ಲಾರಿ ಚಾಲಕರ ಕೆಲಸದ ಅವಧಿ ನಿರ್ಧರಿಸಲು ಶೀಘ್ರದಲ್ಲೇ ಕಾನೂನು ಜಾರಿಗೆ ತರಲಾಗುವುದು ಮತ್ತು 2025 ರ ಅಂತ್ಯದೊಳಗೆ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಹೇಳಿದ್ದಾರೆ.

ರಸ್ತೆ ಸುರಕ್ಷತಾ ಸಪ್ತಾಹ 'ಸಡಕ್ ಸುರಕ್ಷಾ ಅಭಿಯಾನ'ದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ, ರಸ್ತೆ ಸಚಿವಾಲಯವು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಬದ್ಧವಾಗಿದೆ. ರಸ್ತೆ ಸುರಕ್ಷತೆಯ ಎಲ್ಲಾ 4E- ಎಂಜಿನಿಯರಿಂಗ್, ಜಾರಿ, ಶಿಕ್ಷಣ ಮತ್ತು ತುರ್ತುಸ್ಥಿತಿಯ ಕಾಳಜಿಗೆ ಸಂಬಂಧಿಸಿದಂತೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಟ್ರಕ್ ಚಾಲಕರ ಕೆಲಸದ ಸಮಯವನ್ನು ನಿರ್ಧರಿಸಲು ಶೀಘ್ರವೇ ಕಾನೂನು ತರಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com