ಕುಡಿದ ಅಮಲಿನಲ್ಲಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯನ್ನು ಕಾರಿನಲ್ಲಿ ಎಳೆದೊಯ್ದ ಚಾಲಕ
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಇಂದು ಮುಂಜಾನೆ 10-15 ಮೀಟರ್ ದೂರ ಕಾರಿನಲ್ಲಿ ಎಳೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 19th January 2023 04:08 PM | Last Updated: 19th January 2023 04:13 PM | A+A A-

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್
ನವದೆಹಲಿ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಇಂದು ಮುಂಜಾನೆ 10-15 ಮೀಟರ್ ದೂರ ಕಾರಿನಲ್ಲಿ ಎಳೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 3.11 ರ ಸುಮಾರಿಗೆ ಏಮ್ಸ್ ಗೇಟ್ 2 ರ ಎದುರು ಕಾರು ಚಾಲಕ ಹರೀಶ್ ಚಂದ್ರನ ಜೊತೆಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆತ ಕಿಟಕಿ ತೆರೆದಿದ್ದು, ಮಲಿವಾಲ್ ಅವರ ಕೈ ಅದರಲ್ಲಿ ಸಿಲುಕಿಕೊಂಡಿತು. ನಂತರ ಕಾರಿನಲ್ಲಿ ಕುಳಿತುಕೊಳ್ಳುವಂತೆ ಆತ ಹೇಳಿದ್ದು, ಮಲಿವಾಲ್ ವಾಗ್ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮದ್ಯದ ನಶೆಯಲ್ಲಿದ್ದ ಆರೋಪಿ ಹರೀಶ್ ಚಂದ್ರವನ್ನು ಬಂಧಿಸಿ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿ ಹಾಗೂ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ವಾತಿ ಮಲಿವಾಲ್ ತನ್ನ ತಂಡದೊಂದಿಗೆ ಫುಟ್‌ಪಾತ್‌ನಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. "ಎಂದು ದೆಹಲಿ ಪೊಲೀಸರು ಹೇಳಿದರು.